ಇವರೇ ನನ್ನ ಪಾಲಿನ ಗುರು ಎಂದು ಸುಮಲತಾ ಹೇಳಿದ್ದು ಯಾರಿಗೆ..?

ಈ ಬಾರಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆದವು.. ಅದರಲ್ಲೂ ಫಲಿತಾಂಶ ಬಂದ ಮೇಲಂತೂ ರಾಜಕಾರಣ ಸಖತ್ ಹಾಟ್ ಆಗಿದೆ.. ಇಡೀ ಇಂಡಿಯಾವೇ ಒಮ್ಮೆ ಮಂಡ್ಯ ಕಡೆ ತಿರುಗುವಂತೆ ಮಾಡಿತ್ತು ಈ ಲೋಕಸಭಾ ಚುನಾವಣೆ.. ಒಂದು ಕಡೆ ಮಂಡ್ಯ ಅಖಾಡದಲ್ಲಿ ನಿಖಿಲ್ ದೋಸ್ತಿಗಳ ಪರವಾಗಿ ಅಖಾಡಕ್ಕೆ ಇಳಿದಿದ್ದರೆ ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದರು.. ಫಲಿತಾಂಶ ಬಂದ ಮೇಲೆ ಜೆಡಿಎಸ್ ನ ಭದ್ರ ಕೋಟೆಯಾಗಿದ್ದ ಮಂಡ್ಯದಲ್ಲಿ ಜೆಡಿಎಸ್ ಸೋಲನ್ನು ಕಂಡಿದೆ. ಸುಮಲತಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಅವಕಾಶವಿಲ್ಲ. ಆದರೆ, ನಿರ್ಧಾರಗಳಿಗೆ ಬಾಹ್ಯವಾಗಿ ಬೆಂಬಲಿಸಬಹುದು ಎಂದು ತಿಳಿಸಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದ ಅಭಿವೃದ್ಧಿಯೊಂದೇ ನನ್ನ ಗುರಿ, ಈ ಹಿನ್ನೆಲೆಯಲ್ಲಿ ಮಂಡ್ಯ ಜನರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಮಂಡ್ಯ ಮತದಾರರೇ ನನ್ನ ಪಾಲಿನ ಗುರು, ಮಂಡ್ಯದ ಪ್ರತಿ ತಾಲೂಕಿಗೆ ತೆರಳಿ ಎಲ್ಲರಿಗೂ ಧನ್ಯವಾದ ತಿಳಿಸಬೇಕಿದೆ. ಯಾವ ರೀತಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನೂ ಅವರೇ ಹೇಳುತ್ತಾರೆ ಎಂದು ತಿಳಿಸಿದ್ದಾರೆ.. ಒಟ್ಟಾರೆಯಾಗಿ ಮಂಡ್ಯದ ಜನತೆಯ ಒಲವು ಸುಮಲತಾ ಕಡೆ ಇದ್ದಿದ್ದು ಫಲಿತಾಂಶದ ಬಳಿಕ ಗೊತ್ತಾಗಿದೆ.
Comments