ನಿಖಿಲ್ ಸೋಲಿಗೆ ಶಿವರಾಮೇಗೌಡ ಕೊಟ್ಟ ಕಾರಣ ಏನು ಗೊತ್ತಾ..?

ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯದ ಲೋಕಸಭೆ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಅಭೂತ ಪೂರ್ವ ಗೆಲುವು ಸಾಧಿಸಿ, ನಿಖಿಲ್ ಕುಮಾರಸ್ವಾಮಿಗೆ ಭಾರೀ ಆಘಾತ ನೀಡಿದ್ದಾರೆ. ಅವರ ಸೋಲಿಗೆ ಇವಿಎಂ ಕಾರಣ ಎಂದು ಮಾಜಿ ಸಂಸದ ಶಿವರಾಮೇಗೌಡ ಆರೋಪಿಸಿದ್ದಾರೆ.
ಶಿವರಾಮೇಗೌರು ನಿಖಿಲ್ ಸೋಲಿಗೆ ಕಾರಣ ಹುಡುಕುತ್ತ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಲತಾ ದೊಡ್ಡ ಅಂತರದಿಂದ ಗೆಲ್ಲಲು ಸಾಧ್ಯವೇಎಲ್ಲ. ಅದರ ಜೊತೆಗೆ ಬಿಜೆಪಿ ಪಕ್ಷ ದೇಶದಲ್ಲೇ ಹೆಚ್ಚು ಅಂತರದಿಂದ್ದ ಗೆಲವು ಸಾಧಿಸಿದೆ ಇದನೆಲ್ಲವನ್ನು ನೋಡುತಿದ್ದರೆ ಹಿಂದೆ ಕೇಳಿಬಂದಿದ್ದಂತ ಮತಯಂತ್ರದಲ್ಲಿ ದೋಷ ಈಗ ನಿಜ ಎನಿಸುತ್ತಿದೆ ಎಂದು ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದ ಶಿವರಾಮೇಗೌಡ, ಸುಮಲತಾ ಅಂಬರೀಷ್ ವಿರುದ್ಧ ಪದೇ ಪದೇ ನಾಲಿಗೆ ಹರಿಬಿಟ್ಟಿದ್ದರು. ಅವರ ಹೇಳಿಕೆಗಳಿಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಸುಮಲತಾ ಅವರ ಗೆಲುವಿಗೆ ಶಿವರಾಮೇಗೌಡ ಅವರ ಅವಹೇಳನಾಕಾರಿ ಮಾತುಗಳೂ ಕಾರಣ ಎನ್ನಲಾಗಿದೆ.
Comments