ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರ ಕಾಂಗ್ರೆಸ್ ಶಾಸಕ..!!

ಲೋಕಸಮರದ ಫಲಿತಾಂಶ ಬರುವುದಕ್ಕೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ…ನಾಳೆ ಹೊರಬರುವ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ.. ಆದರೆ ಚುನಾವಣೆಯು ಬರುವ ಮೊದಲೇ ಕಾಂಗ್ರೆಸ್ ಶಾಸಕರೊಬ್ಬರು ಸೋಲನ್ನು ಒಪ್ಪಿಕೊಂಡಂತೆ ಇದೆ… ದಿನದ ಹಿಂದಷ್ಟೆ ಇವಿಎಂ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತಿದೆ…
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಜೆಡಿಎಸ್ ಜೊತೆಗಿನ ಮೈತ್ರಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಸುಧಾಕರ್ ಹೇಳಿದ್ದರು.. ಮುಖ್ಯಮಂತ್ರಿಗಳಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದ ಸುಧಾಕರ್ ಇದೀಗ ನೇರವಾಗಿ ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮೈತ್ರಿಯಿಂದಾಗಿ ಕಾಂಗ್ರೆಸ್ ಪಕ್ಷವು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳುತ್ತದೆ ಎಂದಿದ್ದಾರೆ. ಒಟ್ಟಾರೆಯಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ತಪ್ಪಾಗಿದೆ.. ಇದರಿಂದ ಸಾಕಷ್ಟು ತೊಂದರೆಗಳು ಆಗಬಹುದು ಎಂದಿದ್ದಾರೆ.. ಲೋಕಸಮರದ ಫಲಿತಾಂಶದ ಹೊತ್ತಿನಲ್ಲಿ ಈ ರೀತಿಯಾಗಿ ಮಾತನಾಡುತ್ತಿರುವುದು ಹಲವು ಸಂಯಗಳಿಗೆ ಎಡೆ ಮಾಡಿಕೊಟ್ಟಿದೆ.
Comments