ಲೋಕಸಮರದ ಫಲಿತಾಂಶದ ಹೊತ್ತಲೇ ಹೊಸಬಾಂಬ್ ಸಿಡಿಸಿದ ಬಿಎಸ್ ಯಡಿಯೂರಪ್ಪ..!!
ಲೋಕಸಭಾ ಚುನಾವಣೆಯ ಫಲಿತಾಂಶದ ಹೊತ್ತಿನಲ್ಲಿ ಬಿ ಎಸ್ ಯಡಿಯೂರಪ್ಪ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಎಕ್ಟಿಟ್ ಪೂಲ್ ಈಗಾಗಲೇ ಭವಿಷ್ಯ ನುಡಿದಿದೆ. ಆದರೆ ನಾಳೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ನ 20-22 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20-23 ಸೀಟುಗಳನ್ನು ಗೆಲ್ಲಲಿದೆ. ಚುನಾವಣಾ ಪ್ರಚಾರ ಪ್ರಾರಂಭದ ದಿನದಿಂದಲೂ ಸಾಕಷ್ಟು ಅಭ್ಯರ್ಥಿಗಳು ಪಕ್ಷಾಂತರಗೊಂಡಿದ್ದಾರೆ. ಮೇ 23 ರಂದು ಚುನಾವಣಾ ಫಲಿತಾಂಶದ ನಂತರ ಸಾಕಷ್ಟು ಬದಲಾವಣೆಗಳಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.. 20-22 ಕಾಂಗ್ರೆಸ್ ಶಾಸಕರು ಬಿಜೆಪಿ ಬಿಜೆಪಿ ಸೇರಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.. ಲೋಕ ಸಮರದ ಹೊತ್ತಿನಲ್ಲಿ ಯಡಿಯೂರಪ್ಪ ಅವರು ಈ ರೀತಿಯ ಹೊಸಬಾಂಬ್ ಸಿಡಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಶುರು ಮಾಡಿದೆ… ನಾಳೆ ಲೋಕಸಮರದ ಫಲಿತಾಂಶ ಹೊರಬರಲಿದ್ದು ಯಾರ್ಯಾರು ಅಧಿಕಾರದ ಗದ್ದುಗೆಯನ್ನು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ..
Comments