`ಜೆಡಿಎಸ್' ನಾಯಕರು ಕೂಡ ಬೆಂಬಲಿಸಿದ್ದು ಸುಮಲತಾಗೆ..!! ಯಾರ್ಯಾರು ಗೊತ್ತಾ..?

ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮಂಡ್ಯ ಜಿಲ್ಲೆ ಸಾಕಷ್ಟು ಸುದ್ದಿ ಜೊತೆಗೆ ಸದ್ದನ್ನು ಕೂಡ ಮಾಡಿತ್ತು…ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಪರ ಸಾಕಷ್ಟು ಜನರು ಕೆಲಸ ಮಾಡಿದ್ದರು.. ಮಂಡ್ಯದ ಜನತೆ ಅಷ್ಟೆ ಅಲ್ಲದೆ, ಬಿಜೆಪಿಯವರು, ಕೆಲವು ಕಾಂಗ್ರೆಸ್ ನ ಶಾಕಸರು ಕೂಡ ಕೆಲಸ ಮಾಡಿದ್ದರು.. ಇದರಿಂದ ದೋಸ್ತಿ ಸರ್ಕಾರದ ನಾಯಕರು ಕಾಂಗ್ರೆಸ್ ಶಾಸಕರ ಮೇಲೆ ಗರಂ ಆಗಿದ್ದರು…
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಜಿಲ್ಲೆಯ ಜೆಡಿಎಸ್ ನಾಯಕರು ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ನರೇಂದ್ರ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಳವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮಾಜಿ ಶಾಸಕ ನರೇಂದ್ರಸ್ವಾಮಿ, ಎಲ್ಲದಕ್ಕೂ ಕೂಡ ನಮ್ಮ ಬಳಿ ಸಾಕ್ಷಿ ಇದೆ. ಮುಂದಿನ ದಿನಗಳಲ್ಲಿ ಇವೆಲ್ಲವೂ ಕೂಡ ಚರ್ಚೆಗೆ ಬರುತ್ತವೆ.. ಎಲ್ಲವನ್ನೂ ಎದುರಿಸಲ್ಲಿಕ್ಕೆ ರೆಡಿಯಿರಿ. ಯಾರು ಯಾರು ಕುಮಾರಸ್ವಾಮಿಗೆ ಮೋಸ ಮಾಡಿದ್ದಾರೆ. ದೇವೇಗೌಡರ ಹೆಸರು ಹೇಳುತ್ತಿದ್ದವರು ಎಲ್ಲೆಲ್ಲಿ ಮೋಸ ಮಾಡಿದ್ದಾರೆ ಎನ್ನುವುದು ತಿಳಿಯಲಿದೆ. ಇವೆಲ್ಲವೂ ಚರ್ಚೆಗೆ ಈಗಾಗಲೇ ಬಂದು ಬಿಟ್ಟಿದೆ. ಮಂಡ್ಯದಲ್ಲಿ ಏನೇನು ನಡೆದಿದೆ ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.ಒಟ್ಟಾರೆಯಾಗಿ ದೋಸ್ತಿ ಸರ್ಕಾರದಲ್ಲಿಯೇ ನಿಖಿಲ್ ಗೆ ಸಪೋರ್ಟ್ ಮಾಡೋದು ಬಿಟ್ಟು ಸುಮಲತಾ ಗೆ ಸಪೋರ್ಟ್ ಮಾಡಿದ್ದಾರೆ ಎಂಬುದೇ ರಾಜ್ಯ ರಾಜಕೀಯದಲ್ಲಿಯೇ ಸಂಚಲನ ಮೂಡಿಸುವ ಸುದ್ದಿಯಾಗಿದೆ.
Comments