ಕುಮಾರಸ್ವಾಮಿ ಸರ್ಕಾರದಲ್ಲಿ ಮೂರನೇ ವಿಕೆಟ್ ಪತನ..!!
ದೋಸ್ತಿ ಸರ್ಕಾರವು ರಚನೆಯಾದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದೆ.. ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿರುವವ ಸಂಖ್ಯೆ ಕೂಡ ಹೆಚ್ಚಾಗಿದೆ…ಮೇ 23 ರ ಲೋಕಸಭಾ ಚುನಾವಣೆಯ ನಂತರ ರಾಜ್ಯ ಸರ್ಕಾರ ಪತನಗೊಳ್ಳುತ್ತದೆ ಎಂಬುದು ಸಾಕಷ್ಟು ಶಾಸಕರ ಮಾತಾಗಿದೆ… ಪ್ರತಿ ದಿನ ಒಂದಲ್ಲ ಒಂದು ಆರೋಪಗಳು ಮತ್ತು ಪ್ರತ್ಯಾರೋಪಗಳು ಕೇಳಿ ಬರುತ್ತಿರುತ್ತವೆ… ಇದಕ್ಕೆ ಪುಷ್ಟಿ ನೀಡುವಂತೆ ಕುಮಾರಸ್ವಾಮಿ ಸಂಪುಟದಿಂದ ಮೂರನೇ ವಿಕೆಟ್ ಪತನವಾಗೋದು ಕನ್ಪರ್ಮ್ ಆಗಿದೆ ಎಂದು ಹೇಳಲಾಗುತ್ತಿದೆ..
ಕುಮಾರಸ್ವಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವು ಕೂಡ ಇನ್ನೂ ಪೂರ್ಣಗೊಂಡಿಲ್ಲ… ಆಗಲೇ ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರಗೊಂಡಿದ್ದಾರೆ.. ಆಗಲೇ ಮೂರನೇ ಸಚಿವರು ಸಂಪುಟದಿಂದ ಜಾಗ ಖಾಲಿ ಮಾಡುವ ಸಮಯ ಬಂದಿದೆ ಎನ್ನಲಾಗುತ್ತಿದೆ.. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸಾಧ್ಯವಾಗದ ಕಾರಣಕ್ಕೆ ಸಚಿವರಾಗಿದ್ದ ಬಿಎಸ್‌ಪಿಯ ಎನ್ ಮಹೇಶ್ ರಾಜೀನಾಮೆ ಕೊಟ್ಟಿದ್ದರು… ಇದೀಗ ಮತ್ತೊಬ್ಬ ಸಚಿವನನ್ನು ಕೈಬಿಡುವ ಪ್ರಸಂಗ ಎದುರಾಗಿದೆ ಎನ್ನಲಾಗ್ತಿದೆ. ಇದನ್ನು ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಖಚಿತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಶನಿವಾರ ಸಿಎಂ ಕುಮಾರಸ್ವಾಮಿ ಸಚಿವ ಸಂಪುಟ ಸಭೆ ಕರೆದಿದ್ರು. ಈ ವೇಳೆ ಕೃಷ್ಣಭೈರೇಗೌಡ ಅವರು ಸಂಪುಟಕ್ಕೆ ರಾಜೀನಾಮೆ ನೀಡುವ ವಿಚಾರ ಚರ್ಚೆಯಾಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಕುಮಾರಸ್ವಾಮಿ ಸರ್ಕಾರದ ಮೂರನೇ ವಿಕೇಟ್ ಪತನವಾಗುವುದು ಭಾಗಃ ಕನ್ಫರ್ಮ್ ಆಗಿದೆ ಎನ್ನಲಾಗುತ್ತಿದೆ..
Comments