ಸುಮಲತಾ ಗೆಲುವಿಗೆ ಸಿಕ್ತು ಮತ್ತೊಂದು ಮುನ್ಸೂಚನೆ..!!
ಲೋಕಸಭಾ ಚುನಾವಣೆ ನಡೆದಿದ್ದು ಇಂಡಿಯಾದಲ್ಲಿಯೋ ಅಥವಾ ಮಂಡ್ಯದಲ್ಲಿಯೋ ಎಂಬ ಮಾತುಗಳು ಸಾಕಷ್ಟು ಕೇಳಿ ಬಂದಿದ್ದವು.. ಲೋಕಸಮರ ಮುಗಿದ ಮೇಲಾದರೂ ಮಂಡ್ಯ ಅಖಾಡ ತಣ್ಣಗೆ ಆಗುತ್ತದೆ ಎಂದು ಕೊಂಡರೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.. ದೋಸ್ತಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಿಖಿಲ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿದ್ದಿದ್ದರು.. ಆದರೆ ಇವರಿಬ್ಬರ ಪೈಕಿ ಗೆಲುವನ್ನು ಸಾಧಿಸುತ್ತಾರೆ ಎಂಬುದೇ ಕುತೂಹಲಕಾರಿ ವಿಷಯವಾಗಿ ಬಿಟ್ಟಿದೆ..
ಸಾಕಷ್ಟು ಸ್ವಾಮೀಜಿಗಳು ಈಗಾಗಲೇ ಸುಮಲತಾ ಗೆಲ್ಲುತ್ತಾರೆ ಎಂಬ ಮಾತುಗಳನ್ನು ಆಡಿದ್ದಾರೆ. ಇದೀಗ ಅದರ ಜೊತೆಗೆ ಮತ್ತೊಂದು ವಿಡೀಯೋ ತುಂಬಾ ಸದ್ದು ಮಾಡುತ್ತಿದೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿರುವ ದೇವರ ಹೂ ಭವಿಷ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊನ್ನಾದೇವಿ ದೇವರು ಬಲಗಡೆಯಿಂದ ಹೂ ಕೊಟ್ಟಿರುವುದರಿಂದ ಸುಮಲತಾ ಗೆಲವು ಸಾಧಿಸುತ್ತಾರೆ ಎನ್ನಲಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಮತದಾನ ಮುಕ್ತಾಯವಾದ ನಂತರದಲ್ಲಿಯೂ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆದಿವೆ. ರಾಜ್ಯದ ಹೈವೋಲ್ಟೆಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಫಲಿತಾಂಶದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಒಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಗೆಲುವಿಗಾಗಿ ಸಾಕಷ್ಟು ಜನ ಎದುರು ನೋಡುತ್ತಿರುವುದಂತೂ ಸುಳ್ಳಲ್ಲ… ಆದರೆ ಮಂಡ್ಯ ಜನರು ಯಾರ ಮೇಲೆ ಒಲವು ತೋರಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments