ಆರು ಜನ ವಕೀಲರಿಂದ ಸುಮಲತಾ ಅಂಬರೀಶ್ ಮೇಲೆ ದೂರು ದಾಖಲು..!!
ಮಂಡ್ಯ ಲೋಕಸಭಾ ಅಖಾಡ ಮಾತ್ರ ಯಾಕೋ ತಣ್ಣಗೆ ಆಗುವ ರೀತಿ ಕಾಣುತ್ತಿಲ್ಲ… ಒಂದಲ್ಲ ಒಂದು ವಿಷಯಕ್ಕೆ ದಿನ ಸುದ್ದಿಯಾಗುತ್ತಲೇ ಇದೆ… ಮಂಡ್ಯ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅಂಬರೀಶ್ ಮೇಲೆ ಇದೀಗ ದೂರು ದಾಖಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವ ಸುಮಲತಾ ಅಂಬರೀಶ್ ಅವರು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರು ಜನ ವಕೀಲರು ಸುಮಲತಾ ಅಂಬರೀಶ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಈ ವಿಷಯದ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿರುವ ವಕೀಲರಾದ ಕಿರಣ್ ಕುಮಾರ್.ಪಿ, ಸಂತೋಶ್ ಕುಮಾರ್ ಬಿ.ಸಿ, ಶಿವಕುಮಾರ್.ಬಿ.ಎಂ, ಶರತ್ ಜೆ ಎನ್, ಭರೇಶ್ ಎಂಬುವರು, ಸುಮಲತಾ ಅಂಬರೀಶ್ ಅವರು ಸಿ ಆರ್ ಪಿ ಎಫ್ ಯೋಧ ಆರ್ ನಾಯಕ್ ಅವರ ಪೋಸ್ಟರ್ ಬ್ಯಾಲೆಟ್ ಮುಖಾಂತರ ಮತ ಚಲಾಯಿಸಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ಬಳಸಿಕೊಂಡು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಒಬ್ಬ ದೇಶದ ಯೋಧನನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಇದು ಜನಪ್ರತಿನಿಧಿ ಕಾಯ್ದೆ 1951ರ ಕಲಂ 123(7) ಹಾಗೂ ಚುನಾವಣಾ ಆಯೋಗದ ದಿನಾಕ 09-03-2019ರ ಪತ್ರ ಸಂಖ್ಯೆ 437/6INST/2013/CCD&BE ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ. ಅಷ್ಟೆ ಅಲ್ಲದೆ ಸಿ ಆರ್ ಪಿ ಎಫ್ ಯೋಧ ಹಾಕಿದ ಮೊದಲ ಮತವನ್ನು ಅಸಿಂಧುಗೊಳಿಸಿದ್ದರು.. ಯೋಧ ಹಾಕಿದ ಮತವನ್ನೆ ಬೆಂಬಲವಾಗಿ ಇಟ್ಟುಕೊಂಡು ಸುಮಲತಾ ಅಂಬರೀಶ್ ಕ್ಯಾಂಪೇನ್ ಮಾಡಿದ್ದರು.. ಆದರೆ ಮೊದಲ ಮತವನ್ನು ಕೂಡ ಅಸಿಂಧು ಎಂದು ಚುನಾವಣಾ ಆಯೋಗ ತಿಳಿಸಿತ್ತು.. ಈಗ ಸುಮಲತಾ ಅಂಬರೀಶ್ ಮೇಲೆ ದೂರು ದಾಖಲಿಸಿದ್ದಾರೆ. ಚುನಾವಣಾ ಫಲಿತಾಂಶ ಬರುವ ವೇಳೆಗೆ ಇನ್ನೂ ಏನೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments