ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಗೆಲುವು..!! ಅಧಿಕೃತ ಘೋಷಣೆಯಷ್ಟೆ ಬಾಕಿಯಿದೆ..!!!
ಈಗಾಗಲೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.. ಮಂಡ್ಯ ಅಖಾಡ ಮಾತ್ರ ಚುನಾವಣೆ ಮುಗಿದ ಮೇಲೂ ಕೂಡ ಇನ್ನೂ ಸುದ್ದಿಯಲ್ಲಿದ್ದಾರೆ. ಒಂದು ಕಡೆ ಕುಮಾರ ಸ್ವಾಮಿಯವರ ಮಗ ನಿಖಿಲ್ ಮತ್ತೊಂದು ಕಡೆ ಸುಮಲತಾ ಇಬ್ಬರು ಅಖಾಡಕ್ಕೆ ಇಳಿದಿದ್ದರು… ಇಬ್ಬರ ನಡುವೆಯು ಕೂಡ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು… ಆದರೆ ಇದೀಗ ಫಲಿತಾಂಶ ಬರುವ ಮೊದಲೇ ನಿಖಿಲ್ ಗೆಲುವು ನಿಶ್ಚಿತ ಎಂದಿದ್ದಾರೆ..
ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸಂಸದರಾಗಿದ್ದಾರೆ. ಕೆಆರ್ ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಉಸ್ತುವಾರಿ ಸಚಿವ ಪುಟ್ಟರಾಜು, ನಿಖಿಲ್ ಪಾಲ್ಗೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಮಂಡ್ಯಕ್ಕೆ ಆಗಮಿಸುವ ನಿಖಿಲ್ ಅವರಿಗೆ ಸನ್ಮಾನ ಮಾಡುತ್ತಿದ್ದೇವೆ ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಹೇಳಿದ್ದಾರೆ. ನಿಖಿಲ್ ಈಗಾಗಲೇ ಚುನಾವಣೆಯಲ್ಲಿ ಗೆದ್ದಾಗಿದೆ. ಇನ್ನೂ ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿಯಿದೆ ಎನ್ನಲಾಗಿದೆ.. ಆಗ ಮತ್ತೊಮ್ಮೆ ಗೆಲುವಿನ ಸಂಭ್ರಮ ಆಚರಿಸುತ್ತೇವೆ. ನಿಖಿಲ್ ಕುಮಾರಸ್ವಾಮಿ ಬಂದಾಗ ಪಟಾಕಿ ಸಿಡಿಸಿ, ಗುಲಾಬಿ ಹೂವಿನ ಹಾರ ಹಾಕಿ ಸಂಭ್ರಮಿಸಲಾಗುತ್ತದೆ ಎಂದು ತಿಳಿಸಿದರು.. ನಿಖಿಲ್ ಮಂಡ್ಯ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತಾರೆ. ನಿಖಿಲ್ ಗೆಲುವಿನ ಬಗ್ಗೆ ಬೆಟ್ ಕಟ್ಟುತ್ತೇನೆ ಎಂದು ನಾರಾಯಣಗೌಡ ಸವಾಲು ಹಾಕಿದ್ದಾರೆ… ಮೇ 23 ರ ರಾಜಕೀಯ ಭವಿಷ್ಯದ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ… ಒಟ್ಟಿನಲ್ಲಿ ಸುಮಲತ ಮತ್ತು ನಿಖಿಲ್ ಇವರಿಬ್ಬರಲ್ಲಿ ಯಾರೆ ಸೋತರು ತೀವ್ರಮುಖಭಂಗ ಆಗೋದು ಗ್ಯಾರೆಂಟಿ.
Comments