ಫಲಿತಾಂಶಕ್ಕೂ ಮುನ್ನವೇ ಸುಮಲತಾಗೆ ಬಿಗ್ ಶಾಕ್..!!

ಲೋಕಸಮರಕ್ಕೆ ಅರ್ಧಭಾಗದಷ್ಟು ತೆರೆ ಬಿದ್ದಿದ್ದು ಫಲಿತಾಂಶ ಬಂದ ಮೇಲೆಯೇ ಪೂರ್ತಿ ತೆರೆ ಬೀಳಲಿದೆ.. ಆದರೆ ಕಾವು ಮಾತ್ರ ಕಡಿಮೆಯಾದಂಗೆ ಕಾಣುತ್ತಿಲ್ಲ.. ಬೇರೆಲ್ಲಾ ಕ್ಷೇತ್ರಗಳಿಗಿಂತ ಮಂಡ್ಯ ಕ್ಷೇತ್ರ ಮಾತ್ರ ರಣರಂಗವಾಗಿತ್ತು..ಒಂದು ಕಡೆ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮತ್ತೊಂದು ಕಡೆ ಸುಮಲತಾ ನಡುವೆ ಪ್ರತಿಷ್ಟೆಯ ಪೈಪೋಟಿ ಏರ್ಪಟ್ಟಿತ್ತು.. ಇದೀಗ ಚುನಾವಣಾ ಆಯೋಗ ಸುಮಲತ ಅವರಿಗೆ ಬಿಗ್ ಶಾಕ್ ನೀಡಿದೆ.
ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಸುಮಲತಾ ಅಂಬರೀಶ್ ಅವರಿಗೆ ಬಂದಿದ್ದ ಮೊದಲ ಮತವನ್ನು ಚುನಾವಣಾ ಆಯೋಗ ರದ್ದುಗೊಳಿಸುವಂತೆ ಆದೇಶಿಸಿದೆ. ಸಿ.ಆರ್.ಪಿ.ಎಫ್. ಯೋಧರೊಬ್ಬರು ಸುಮಲತಾ ಅಂಬರೀಶ್ ಪರವಾಗಿ ಮತ ಚಲಾವಣೆ ಮಾಡಿದ್ದರು... ಅಲ್ಲದೆ, ತಾವು ಮತ ಹಾಕಿದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಜೊತೆ ಖುಷಿಯಿಂದ ಹಂಚಿಕೊಂಡಿದ್ದರು.. ಚುನಾವಣೆಗೂ ಮೊದಲೇ ಸುಮಲತಾ ಅಂಬರೀಶ್ ಅವರಿಗೆ ಮೊದಲ ಮತ ಬಂದಿದ್ದು ಪ್ರಚಾರದ ವೇಳೆ ಎಲ್ಲರ ಗಮನವನ್ನು ಸೆಳೆದಿತ್ತು. ಇದನ್ನೇ ಪ್ರಚಾರದಲ್ಲಿಯೂ ಕೂಡ ಬಳಸಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ವಕೀಲ ಕಿರಣ್ ಕುಮಾರ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ, ಮತದಾನ ಗೌಪ್ಯತೆಯ ಕಾನೂನಿನ ಪ್ರಕಾರ, ಯೋಧನ ಮತವನ್ನು ಅಸಿಂಧುಗೊಳಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಒಟ್ಟಾರೆಯಾಗಿ ಮೇ 23 ರಂದು ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಎದುರು ನೋಡುತ್ತಿದ್ದಾರೆ… ಯಾರ ಕೊರಳಿಗೆ ವಿಜಯದ ಮಾಲೆಗಳು ಬೀಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
Comments