ಮಂಡ್ಯ ಜಿಲ್ಲೆಯ ಭವಿಷ್ಯ ನುಡಿದ ಬಸವಾನಂದ ಸ್ವಾಮೀಜಿ..!! ಗೆಲುವು ಯಾರದು ಗೊತ್ತಾ..?
ಲೋಕಸಭಾ ಚುನಾವಣೆಯು ಮುಗಿದಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಫಲಿತಾಂಶ ಬರುವುದು ಬಾಕಿ ಇದೆ… ಎಲ್ಲರೂ ಕೂಡ ಸೋಲು ಗೆಲುವಿನ ಲೆಕ್ಕಚಾರ ಹಾಕುತ್ತಿದ್ದಾರೆ… ಆದರೆ ಮಂಡ್ಯದ ಫಲಿತಾಂಶದ ಬಗ್ಗೆ ಮಾತ್ರ ಎಲ್ಲರೂ ಕೂಡ ತಲೆ ಕೆಡಿಸಿಕೊಂಡಿದ್ದಾರೆ..ಆದರೆ ಸ್ವಾಮೀಜಿಯೊಬ್ಬರು ಗೆಲುವು ಯಾರದು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಿಂತಿದ್ದು, ಇಲ್ಲಿನ ಸ್ವಾಮೀಜಿಯೋರ್ವರು ಸುಮಲತಾ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ನಾನಾ ರೀತಿಯ ಚುನಾವಣೆಯ ಫಲಿತಾಂಶದ ಮಾಹಿತಿಗಳು ಲಭ್ಯವಾಗುತ್ತಿವೆ… ಹಲವು ರೀತಿಯ ಚುನಾವಣಾ ಭವಿಷ್ಯಗಳನ್ನು ನುಡಿದಿದ್ದು, ಇನ್ನೋರ್ವ ಸ್ವಾಮೀಜಿ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.. ವಿಭೂತಿಮಠದ ಬಸವಾನಂದ ಸ್ವಾಮೀಜಿ ಮಂಡ್ಯ ಚುನಾವಣೆಯ ವಿಜಯದ ಭವಿಷ್ಯ ನುಡಿದಿದ್ದಾರೆ ಎನ್ನಲಾಗುತ್ತಿದೆ.. ಬೀದರ್ ಜಿಲ್ಲೆ ಬಸವಕಲ್ಯಾಣದ ಬಸವಧರ್ಮದ ಪ್ರಸಾರಕ ಬಸವಾನಂದ ಸ್ವಾಮಿ ಮಾತೃ ಹೃದಯಿ ಸುಮಲತಾ ಗೆಲ್ಲುವುದರ ಜೊತೆಗೆ ಕೇಂದ್ರ ಸಚಿವರಾಗುವುದು ನಿಶ್ವಿತ. ಪ್ರಬುದ್ಧ, ಮೃದು ಮಾತಿನಿಂದ ಎಲ್ಲ ಸಮುದಾಯದವರ ಹೃದಯ ಗೆದ್ದಿದ್ದಾರೆ. ಸುಮಲತಾ ಅಂಬರೀಷ್ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಪರ ಫಲಿತಾಂಶ ಬರುವುದಾಗಿ ತಿಳಿಸುತ್ತಿದ್ದಾರೆ… ಭವಿಷ್ಯ ಏನೇ ಹೇಳಿದರೂ ಮಂಡ್ಯದ ಜನತೆ ಯಾರ ಪರ ಒಲವು ತೋರಿದ್ದಾರೆ ಎಂಬುದನ್ನು ಮೇ 23 ರ ವರೆಗೆ ಕಾದು ನೊಡಬೇಕಿದೆ.
Comments