ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಅವರ ಅಪ್ಪ ಮೇಲೆ ಆಣೆ ಮಾಡಲಿ: ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ..!!!

ಲೋಕ ಸಮರದ ಫಲಿತಾಂಶ ಬರುವ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.. ಮೈತ್ರಿ ಸರ್ಕಾರ ಉರುಳುತ್ತದೆಯೋ ಎಂಬ ಚಿಂತೆಯಲ್ಲಿ ಸಾಕಷ್ಟು ಜನ ಇದ್ದಾರೆ. ಇನ್ನೂ ಬಿಜೆಪಿ ಪಕ್ಷದವರು ಹೇಗಾದರೂ ಮಾಡಿ ಎಡಿಯೂರಪ್ಪ ಅವರನ್ನೆ ಮುಖ್ಯಮಂತ್ರಿ ಮಾಡಬೇಕು ಎಂದು ಪಣ ತೊಟ್ಟಂತೆ ಕಾಣುತ್ತಿದೆ.. ಹೀಗಾಗಿ ಬಿಜೆಪಿಯ ಮಾಜಿ ಸಚಿವ ಸಿಎಂ ಕುಮಾರಸ್ವಾಮಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬರೀ ಸುಳ್ಳು. ಪೊಳ್ಳು ಭರವಸೆ ಕೊಡುವುದೇ ಸಾಧನೆ ಮಾಡಿಕೊಂಡಿದ್ದರು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ಧಾಳಿ ನಡೆಸಿದರು. ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ 'ಅನ್ನಭಾಗ್ಯದ ಹೆಸರಿನಲ್ಲಿ ಮೋಸದ ಕೆಲಸ ಮಾಡಿದ್ದಾರೆ ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು, ಸಿದ್ದರಾಮಯ್ಯ ಭಾವಚಿತ್ರವಿರುವ ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು, ಚೀಲದೊಳಗಿನ ಅಕ್ಕಿ ಪ್ರಧಾನಿ ಮೋದಿ ಕೊಟ್ಟಿದ್ದು' ಎಂದು ಗೋವಿಂದ ಕಾರಜೋಳ ಟೀಕಡ ಮಾಡಿದ್ದಾರೆ. ಇನ್ನೂ ರೈತರ ಎಷ್ಟು ಸಾಲಮನ್ನಾ ಮಾಡಿದ್ದಾರೆಂದು ಕುಮಾರಸ್ವಾಮಿ ಅವರಪ್ಪನ ಮೇಲೆ ಆಣೆ ಮಾಡಿ ಹೇಳಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸಂಬಂಧ ಬಹಳ ದಿನ ಇರಲ್ಲ, ಪರಸ್ಪರ ಬೆನ್ನಿಗೆ ಚೂರಿ ಹಾಕಿ ಕಚ್ಚಾಡುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ತಿಳಿಸಿದರು.. ಮೈತ್ರಿ ಸರ್ಕಾರ ಇನ್ನೂ ಹೆಚ್ಚು ದಿನ ಉಳಿಯುವುದಿಲ್ಲ….ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಪರಸ್ವರ ಕಚ್ಚಾಡುತ್ತಿದ್ದಾರೆ.. ಇಂತಹವರಿಗೆ ಏನು ಮಾಡಬೇಕು ಗೊತ್ತಿಲ್ಲ.. ಫಲಿತಾಂಶ ಬಂದ ಮೇಲೆ ಸರ್ಕಾರ ಪತನವಾಗುವುದು ಗ್ಯಾರೆಂಟಿ ಎಂದಿದ್ದಾರೆ.
Comments