ಸಿಎಂ ಕುಮಾರಸ್ವಾಮಿಯವರ ನಿದ್ದೆ ಕೆಡಿಸಿದ ಗುಪ್ತಚರ ವರದಿ..!? ಈ ಬಾರಿ ಗೆಲ್ಲೋದು ಇವರೆ ನೋಡಿ…!?
ಲೋಕಸಭಾ ಚುನಾವಣೆಯು ಮುಗಿದರೂ ಕೂಡ ಅದರ ಕಾವು ಇನ್ನೂ ತಣ್ಣಗೆ ಆಗಿಲ್ಲ.. ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗುತ್ತಲೇ ಇದೆ… ಅದರಲ್ಲೂ ಮಂಡ್ಯ ಅಖಾಡ ರಾಜಕಾರಣಿಗಳ ನಿದ್ದೆ ಹಾಳು ಮಾಡಿರುವುದಂತೂ ಸುಳ್ಳಲ್ಲ… ಇದೀಗ ಸಿಎಂ ಕುಮಾರಸ್ವಾಮಿಯವರು ಕೂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದ ಫಲಿತಾಂಶದ ಕುರಿತಾಗಿ ಗುಪ್ತಚರ ಇಲಾಖೆಯಿಂದ ಸಲ್ಲಿಕೆಯಾಗಿರುವ ವರದಿಗಳು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೆಮ್ಮದಿಗೆ ಭಂಗ ತಂದಿವೆ ಎಂದು ಹೇಳಲಾಗಿದೆ.
ಮತದಾನದ ಬಗ್ಗೆ ಕುಮಾರಸ್ವಾಮಿಯವರು ತುಂಬಾ ತಲೆ ಕೆಡಿಸಿಕೊಂಡಿದ್ದಾರೆ. ಮತದಾನ ಪೂರ್ವ ಮತ್ತು ಮತದಾನದ ಬಳಿಕ ಸಂಗ್ರಹಿಸಲಾದ ಗುಪ್ತಚರ ಮಾಹಿತಿಗಳ ವರದಿ ಪಡೆದುಕೊಂಡಿರುವ ಸಿಎಂ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ನಿಖಿಲ್ ಕುಮಾರ್ ಭಾರೀ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮೊದಲಿಗೆ ಗುಪ್ತಚರ ಇಲಾಖೆ ವರದಿ ನೀಡಿತ್ತು ಎನ್ನಲಾಗಿದೆ. ಬಳಿಕ ಎರಡನೇ ವರದಿಯಲ್ಲಿ ನಿಖಿಲ್ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ನಂತರದಲ್ಲಿ ನಿಖಿಲ್ ಗೆಲುವು ಕಷ್ಟವಾಗಿದ್ದು, ಗೆಲ್ಲುವ ಸಾಧ್ಯತೆ ಶೇ. 50 ರಷ್ಟು ಇದೆ. ಯಾರೇ ಗೆದ್ದರೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂದು ವರದಿ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಸಿಎಂ ಪುಲ್ ಟೆನ್ಷನ್ ಮಾಡಿಕೊಂಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ನಾಯಕರು ಸುಮಲತಾ ಪರ ಕೆಲಸ ಮಾಡಿದ್ದಾರೆ ಎಂದು ತಿಳಿದಿಬಂದಿದೆ.. ಇದೇ ಹಿನ್ನಲೆಯಲ್ಲಿ ನಿಖಿಲ್ ಗೆ ಸೋಲು ಉಂಟಾಗಬಹುದು ಎಂದು ಹೇಳಲಾಗುತ್ತಿದೆ… ಇದರಿಂದ ಹೆಚ್ ಡಿಕೆ ಬಾರೀ ಅಸಮಾಧಾನಗೊಂಡಿದ್ಧಾರೆ ಎನ್ನಲಾಗುತ್ತಿದೆ. ಏನೇ ಆದರೂ ಮೇ 23 ರ ವರೆಗೆ ಕಾದು ನೋಡಲೇ ಬೇಕಿದೆ..
Comments