'ಸುಮಲತಾ ಗೆಲುವು ಖಚಿತವಾದ ಮೇಲೆಯೇ ಡಿನ್ನರ್ ಪಾರ್ಟಿ ಅರೆಂಜ್ ಮಾಡಿದ್ದು'..!! ಶಾಕಿಂಗ್ ಹೇಳಿಕೆ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ

ಮೊನ್ನೆ ಮೊನ್ನೆಯಷ್ಟೆ ಸುಮಲತಾ ಅಂಬರೀಶ್ ಡಿನ್ನರ್ ಪಾರ್ಟಿ ನಡೆಸಿದ್ದು ಎಲ್ಲರಿಗೂ ಕೂಡ ಗೊತ್ತೆ ಇದೆ.. ಈ ವಿಷಯ ದೋಸ್ತಿ ನಾಯಕರಲ್ಲಿ ಒಂದು ರೀತಿಯ ತಳಮಳ ಉಂಟು ಮಾಡಿದ್ದಂತೂ ಸುಳ್ಳಲ್ಲ.. ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದರೆ ದೋಸ್ತಿ ನಾಯಕರು ಸುಭದ್ರ ಸರ್ಕಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ..
ಈಗಾಗಲೇ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವು ಖಚಿತವಾಗಿರುವ ಹಿನ್ನೆಲೆಯಲ್ಲಿ ಡಿನ್ನರ್ ಪಾರ್ಟಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯ ಕಾಂಗ್ರೆಸ್ ಮುಖಂಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿರುವ ವಿಷಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು…ಸುಮಲತಾ ಗೆಲುವು ನಿಶ್ಚಿತ ಎಂದು ಎಲ್ಲರೂ ಕೂಡ ಹೇಳುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ದೋಸ್ತಿ ನಾಯಕರು ತಳಮಳಗೊಂಡಿದ್ದಾರೆ..ಸುಮಲತಾ ಗೆಲುವು ನಿಶ್ಚಿತ ಎಂದ ಮೇಲೆ ಸುಮಲತಾ ಡಿನ್ನರ್ ಪಾರ್ಟಿ ಅರೆಂಜ್ ಮಾಡಿರೋದು ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ಮೈಸೂರಿನಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಬಂದಿವೆ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿರುವುದು ನಿಜ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಮೇ 23 ರಂದು ಬರುವ ಫಲಿತಾಂಶಕ್ಕಾಗಿ ಎಲ್ಲರೂ ಕುತೂಹಲದಿಂದ ಕಾತುರದಿಂದ ಕಾಯುತ್ತಿದ್ದಾರೆ.
Comments