ಕುತೂಹಲ ಮೂಡಿಸಿದ ಅಪ್ಪ-ಮಗನ ದಿಢೀರ್ ಭೇಟಿ..!! ಕಾರಣ ಸುಮಲತಾನ..?
ಲೋಕಸಮರ ಮುಗಿದ ಮೇಲೆ ಎಲ್ಲರೂ ಕೂಡ ಸೋಲು ಗೆಲುವಿನ ಲೆಕ್ಕಚಾರ ಆಗುತ್ತಿದ್ದಾರೆ… ಮೇ 23 ಕ್ಕೆ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ.. ಇದರ ನಡುವೆಯೇ ದೋಸ್ತಿ ನಾಯಕರಲ್ಲಿ ಸಮಾಧಾನ ಮನೆ ಮಾಡಿದೆ.. ಅಷ್ಟೆ ಅಲ್ಲದೆ ಪಕ್ಷಾಂತರ ಪರ್ವ ಜೋರಾಗಿಯೇ ಇದೆ… ಮಂಡ್ಯದಲ್ಲಿ ಮಾತ್ರ ಇನ್ನೂ ರಾಜಕೀಯದ ಕಾವು ಕಡಿಮೆ ಆಗಿಲ್ಲ… ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಅಖಾಡಕ್ಕೆ ಇಳಿದಿದ್ದು ಸಾಕಷ್ಟು ನಾಯಕರಲ್ಲಿ ಇದೇ ವಿಷಯಕ್ಕೆ ವೈ ಮನಸ್ಸು ಮೂಡಿದೆ ಎನ್ನಬಹುದು..
ಅಷ್ಟೆ ಅಲ್ಲದೆ ಮಂಡ್ಯದಲ್ಲಿ ಬಂಡಾಯವೆದ್ದಿರುವ ಕೈ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್‍ಗೆ ಸಿಎಂ ಕುಮಾರಸ್ವಾಮಿ ದೂರು ನೀಡಿದ್ದಾರೆ. ಇದರ ಮಧ್ಯೆ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಉಡುಪಿಯ ರೆಸಾರ್ಟ್ ಗೆ ಪುತ್ರ ನಿಖಿಲ್ ರನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೆಚ್.ಡಿ.ಕೆ. ಜೊತೆಗೆ ನಿಖಿಲ್ ಉಡುಪಿಯ ಕಾಪುವಿನ ರೆಸಾರ್ಟ್ ನಲ್ಲೇ ತಂಗಲಿದ್ದಾರೆ. ಮಂಡ್ಯ ಫಲಿತಾಂಶದ ವಿಚಾರವಾಗಿ ಚಿಂತಿತರಾಗಿರುವ ನಿಖಿಲ್ ಗೆ, ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿ, ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.. ಸುಮಲತಾಜೊತೆ ಕಾಣಿಸಿಕೊಂಡ ಕಾಂಗ್ರೆಸ್ ನಾಯಕರು ಸುಮಲತಾ ಪರ ಕೆಲಸ ಮಾಡಿದ್ದಾರೆ ಎಂಬಂತಹ ಮಾತುಗಳು ಕೇಳಿ ಬಂದಂತಹ ಹಿನ್ನಲೆಯಲ್ಲಿ ಕುಮಾರಸ್ವಾಮಿಯರು ಮಗನನ್ನು ಕರೆಸಿಕೊಂಡು ಧೈರ್ಯ ತುಂಬಿದ್ದಾರೆ ಎನ್ನಲಾಗುತ್ತಿದೆ.
Comments