ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ..!! ಶಾಕಿಂಗ್ ಹೇಳಿಕೆ ಕೊಟ್ಟ ಜೆಡಿಎಸ್ ಮುಖಂಡ.!!!

01 May 2019 12:47 PM | Politics
1263 Report

ಲೋಕಸಮರ ಶುರುವಾಗಿದಿನಿಂದಲೂ ಕೂಡ ಒಂದಲ್ಲ ಸಮಸ್ಯೆಗಳು ಆರೋಪಗಳು, ಪ್ರತ್ಯಾರೋಪಗಳು ಕೂಡ ಕೇಳಿ ಬರುತ್ತಿವೆ… ಇದೀಗ ಜಿಲ್ಲಾ ಉಸ್ತುವರಿ ಸಚಿವ ಜಿ ಟಿ ದೇವೆಗೌಡ ರಾಜಕೀಯ ವಲಯದಲ್ಲಿ ಬಾರೀ ಚರ್ಚೆಯಾಗುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಜೆಡಿಎಸ್ ಕಾರ್ಯಕರ್ತರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೆಗೌಡರು ‘ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಆದರೆ, ಮೈತ್ರಿಯಲ್ಲಿ ಏನೋ ತಪ್ಪಾಗಿದೆ. ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿನ ಚುನಾವಣೆ ನಡೆಸಿದ್ದವು. ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಕಾಂಗ್ರೆಸ್​​ಗೆ ಮತ ಹಾಕಿದ್ದಾರೆ. ಜೆಡಿಎಸ್​​ ಅವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಹೇಳಿದರು.. ಲೋಕಸಮರದಲ್ಲಿ ತುಂಬಾ ಗೊಂದಲ ಏರ್ಪಟ್ಟು ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರಗೊಂಡಿದ್ದು ನಿಜ.. ಈ ಬಾರಿ ಲೋಕಸಮರದಲ್ಲಿ ಯಾರು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  

Edited By

Manjula M

Reported By

Manjula M

Comments