ಮಂಡ್ಯ ಲೋಕಸಭಾ ಚುನಾವಣೆಯ ವಿಚಾರದಲ್ಲಿ ಸಿಎಂ ತಪ್ಪು ಮಾಡಿದ್ದಾರೆ..!! ಅಸಮಾಧಾನಗೊಂಡ ಕಾಂಗ್ರೆಸ್ ಸಚಿವ..!!

01 May 2019 11:41 AM | Politics
1097 Report

ಲೋಕಸಭಾ ಚುನಾವಣೆಯು ಮುಗಿದಿದೆ.. ಚುನಾವಣೆಯ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಸಾಕಷ್ಟು ಗೊಂದಲಗಳು ರಾಜಕೀಯ ವಲಯದಲ್ಲಿ ಸೃಷ್ಟಿಯಾಗುತ್ತಿವೆ. ಇದೀಗ ಜಮೀರ್ ಅಹ್ಮದ್ ಕೂಡ ಮತ್ತೊಂದು ಗೊಂದಲವನ್ನು ಸೃಷ್ಟಿಸಿದ್ದಾರೆ.. ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ ನಾಯಕರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಅವರು ತಪ್ಪು ಮಾಡಿದ್ದಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಮೊದಲು ಚೆಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ ನಾಯಕರನ್ನು ಕರೆದು ಚರ್ಚೆ ನಡೆಸಬೇಕಾಗಿತ್ತು.. ಆದರೆ ಸಿಎಂ ಕುಮಾರಸ್ವಾಂಇಯವರು ಆರೀತಿ ಮಾಡಲಿಲ್ಲ.. ಲೋಕಸಭೆ ಉಪ ಚುನಾವಣೆಗೆ ಜೆಡಿಎಸ್‌ನಿಂದ ಶಿವರಾಮೇಗೌಡರನ್ನು ನಿಲ್ಲಿಸುವ ವೇಳೆ ಎಲ್ಲರ ಜತೆ ಚರ್ಚೆ ನಡೆಸಿದ್ದರು. ಹೀಗಾಗಿ ಎಲ್ಲಾ ನಾಯಕರು ಹೋಗಿ ಕೆಲಸ ಮಾಡಿದ್ದರು. ಅದರಿಂದಲೇ ಶಿವರಾಮೇಗೌಡ ಭಾರಿ ಅಂತರದಿಂದ ಗೆದ್ದಿದ್ದರು. ಅದೇ ಕೆಲಸವನ್ನು ನಿಖಿಲ್‌ರನ್ನು ಕಣಕ್ಕಿಳಿಸುವಾಗಲೂ ಕುಮಾರಸ್ವಾಮಿ ಮಾಡಬೇಕಿತ್ತು ಎಂದು ಬೇಸರವನ್ನು ವ್ಯಕ್ತ ಪಡಿಸಿದ್ದರು.. ಒಟ್ಟಾರೆಯಾಗಿ ನಿಖಿಲ್ ಅವರನ್ನು ಚುನಾವಣೆಗೆ ನಿಲ್ಲಿಸುವ ಮೊದಲು ಒಂದು ಬಾರಿ ಚರ್ಚೆ ಮಾಡಬೇಕಿತ್ತು ಎಂಬುದು ಜಮೀರ್ ಅಹ್ಮದ್ ಅವರ ವಾದ.

Edited By

Manjula M

Reported By

Manjula M

Comments