ಫಲಿತಾಂಶಕ್ಕೂ ಮುನ್ನವೇ ದೋಸ್ತಿ ಸರ್ಕಾರದಲ್ಲಿ ಶುರುವಾಯ್ತು ಸಮರ..!! ಕಾರಣ ಇದೆ ನೋಡಿ..!!!

ಈಗಾಗಲೇ ಲೋಕ ಸಮರ ಮುಗಿಸಿರುವ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.. ಇತ್ತ ಅಭ್ಯರ್ಥಿಗಳು ಲೋಕ ಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ಸಮ್ಮಿಶ್ರ ಸರ್ಕಾರದಲ್ಲಿ ಒಡಕು ಉಂಟಾಗಿದೆ… ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಕೇಳಿ ಬರುತ್ತಿದೆ. ಕಾಂಗ್ರೆಸ್ ಶಾಸಕರ ನಡುವೆ ಪತ್ರ ಸಮರ ಶುರುವಾಗಿದೆ. ಸದ್ಯ ರಾಜಕೀಯ ಪರಿಸ್ಥಿತಿ ಯಾಕೋ ಹದಗೆಟ್ಟಿರುವ ರೀತಿ ಕಾಣುತ್ತಿದೆ. ಇದನ್ನು ಹೇಗೆ ಸರಿಪಡಿಸಬೇಕು ಎಂದು ಸಾಕಷ್ಟು ಶಾಸಕರು ಸೇರಿ ಸಭೆ ನಡೆಸಲು ತಿರ್ಮಾನ ಕೈಗೊಂಡಿದ್ದರು…
ಹಾಗಾಗಿ ಯಶವಂತಪುರ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಸಭೆ ನಡೆಸುವುದಕ್ಕಾಗಿ ಕರೆ ನೀಡಿದ್ದರು, ಆದರೆ ಇದಕ್ಕೆ ಕಾಂಗ್ರೆಸ್ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತ ವಾಗಿದೆ. ಸೋಮಶೇಖರ್ ಬರೆದಿರುವ ಪತ್ರದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ಸನ್ನಿವೇಶವು ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಹೀಗಾಗಿ ಎಲ್ಲ ಸಮಾನ ಮನಸ್ಕ ಶಾಸಕರು ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಲಿ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಬೆಳಗ್ಗೆ 11.30 ಕ್ಕೆ ನಗರದ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆವ ಸಭೆಗೆ ತಪ್ಪದೆ ಹಾಜರಾಗಬೇಕು ಎಂದು ಬರೆದಿದ್ದರು.. ಈ ಪತ್ರಕ್ಕೆ ಸಾಕಷ್ಟು ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಂದು ನಡೆದ ಸಭೆಗೆ ಯಾರು ಯಾರು ಹಾಜರು ಆಗಿದ್ದರು ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.. ದೋಸ್ತಿ ನಾಯಕರಲ್ಲಿಯೇ ಈ ರೀತಿ ಒಡುಕು ಮೂಡುತ್ತಿರುವುದು ಸದ್ಯ ರಾಜಕೀಯ ವಲಯದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ ಎನ್ನಬಹುದು,
Comments