ಹಣ ಪಡೆದಿದ್ದು ಪ್ರೂವ್ ಆದರೆ ನಿವೃತ್ತಿ ಪಡೆಯುತ್ತೇನೆ ಎಂದ ಬಿಜೆಪಿ ನಾಯಕ..!!

30 Apr 2019 10:55 AM | Politics
878 Report

ಲೋಕಸಮರದ ಹೊತ್ತಿನಲ್ಲಿ ಪಕ್ಷಾಂತರ ಮಾಡುವ ಶಾಸಕರ ಸಂಖ್ಯೆ ಹೆಚ್ಚಾಗಿಯೇ ಇತ್ತು.. ಒಂದು ಕಡೆ ಲೋಕಸಮರದ ಚಿಂತೆ, ಮತ್ತೊಂದು ಕಡೆ ಅತೃಪ್ತ ಶಾಕಸಕು ಪಕ್ಷ ಬಿಡುತ್ತಿರುವ ಚಿಂತೆ ಸಾಮಾನ್ಯವಾಗಿ ಎಲ್ಲಾ ಪಕ್ಷದವರಿಗೂ ಕೂಡ ಕಾಡುತ್ತಿತ್ತು… ಅದೇ ಹೊತ್ತಿನಲ್ಲಿಏ ಉಮೇಶ್ ಜಾಧವ್ ಪಕ್ಷ ಬಿಟ್ಟು ಬಿಜೆಪಿಯನ್ನು ಸೇರಿಕೊಂಡಿದ್ದರು. ಈ ನಡುವೆ ಸಾಕಷ್ಟು ಮಾತುಗಳು ಕೂಡ ಕೇಳಿ ಬಂದವು..

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಬಿಟ್ಟು ದೇವರಾಜ ಅರಸು ಜೊತೆ ಹೋಗಿ ಮತ್ತೆ ಪಕ್ಷಕ್ಕೆ ಮರಳಿ ಬಂದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್  ಪಕ್ಷವನ್ನು ಸೇರಿಕೊಂಡಿದ್ದರು..ಇವರೆಲ್ಲರೂ ಕೂಡ ದುಡ್ಡು ತೆಗೆದುಕೊಂಡು ಪಕ್ಷ ಬಿಟ್ರಾ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ  ಉಮೇಶ್ ಜಾಧವ್ ವಾಗ್ದಾಳಿ ನಡೆಸಿದರು.. ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಜಾಧವ್ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಮೇಲೆ ಆರೋಪ ಮಾಡಲು ಯಾವುದೇ ವಿಷಯವಿಲ್ಲ. ಹೀಗಾಗಿ ಪದೇ ಪದೆ ಮಾರಾಟವಾಗಿದ್ದೀರಾ ಎಂದು ಹೇಳುತ್ತಲೆ ಇದ್ದಾರೆ. ಅವರು ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲಿ, ದುಡ್ಡು ಪಡೆದು ನಾನು ಪಕ್ಷ ಬಿಟ್ಟಿದ್ದೆನೆ ಎಂಬುದು ಪ್ರೂವ್ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ಒಟ್ಟಾರೆಯಾಗಿ ಈ ರಾಜಕೀಯ ಎಂಬ ನದಿಯಲ್ಲಿ ಯಾರು ಮುಳುಗುತ್ತಾರೋ, ಯಾರು ಈಜಿ ದಡ ಸೇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments