ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ ಸ್ಯಾಂಡಲ್ ವುಡ್ ಸ್ಟಾರ್ ನಟಿ..!?
ಲೋಕಸಮರದ ಕಾವು ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ… ಆದರೆ ಇನ್ನೂ ಫಲಿತಾಂಶ ಬರುವವರೆಗೂ ಕೂಡ ಕಾಯಲೇ ಬೇಕಾಗಿದೆ..ಮೇ 23 ಕ್ಕೆ ಲೋಕಸಮರದ ಫಲಿತಾಂಶ ಹೊರ ಬೀಳಲಿದ್ದು, ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಇದರ ನಡುವೆ ನಟಿ, ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.. ಆದರೆ ರಮ್ಯಾ ಇದೆ ಮೊದಲ ಬಾರಿ ಏನಲ್ಲ ಪ್ರಧಾನಿಯವರನ್ನು ಟೀಕಿಸುತ್ತಿರುವುದು.. ಸಾಕಷ್ಟು ಬಾರಿ ಅವರ ವಿರುದ್ದ ಟ್ರೋಲ್ ಮಾಡುತ್ತಲೆ ಇದ್ದಾರೆ. ನೆಟ್ಟಿಗರು ಕೂಡ ರಮ್ಯ ವಿರುದ್ದ ಸಾಕಷ್ಟು ಬಾರಿ ಹರಿ ಹಾಯ್ದಿದ್ದಾರೆ...ಆದರೂ ಕೂಡ ರಮ್ಯ ಮತ್ತದೇ ಚಾಳಿಯನ್ನು ಮುಂದುವರೆಸಿದ್ದಾರೆ.
ಇದೀಗ ರಮ್ಯಾ ಪ್ರಧಾನಿ ಮೋದಿಯವರ ವಿರುದ್ದವಾಗಿ ಟ್ವೀಟ್ ಮಾಡಿದ್ದಾರೆ… ಮೋದಿಯವರು ಮಗುವಿನ ಕಿವಿಯನ್ನು ಹಿಡಿದುಕೊಂಡಿರುವ ಪೋಟೋದೋ ಜೊತೆಗೆ ಹಿಟ್ಲರ್ ಪೋಟೋ ಹಾಕಿ what is your thoughts ಎಂದು ಬರೆದುಕೊಂಡಿದ್ದಾರೆ.. ಮೋದಿಯನ್ನು ರಮ್ಯಾ ಪದೇ ಪದೇ ಟೀಕೆಗೆ ಗುರಿ ಪಡಿಸುತ್ತಿರುವುದರಿಂದ ಬಿಜೆಪಿಯವರು ರಮ್ಯಾ ವಿರುದ್ದ ಕೆಂಡಾಮಂಡಲವಾಗಿದ್ದಾರೆ.. ಇದಕ್ಕೂ ಮೊದಲು ಕೂಡ ಹಲವು ಬಾರಿ ರಮ್ಯ ಅವರು ಮೋದಿಯವರ ಕಾಲನ್ನು ಎಳೆದಿದ್ದರು… ಟ್ವೀಟ್ ಮಾಡಿದ ರಮ್ಯಾ ಅವರಿಗೆ ರೀಟ್ವೀಟ್ ಮಾಡುವುದರ ಜೊತೆಗೆ ವಾರ್ನಿಂಗ್ ಕೂಡ ಮಾಡಿದ್ದರು.. ಆದರೆ ಇದ್ಯಾವುದು ಕೂಡ ವರ್ಕೌಟ್ ಆದ್ದಂಗೆ ಕಾಣುತ್ತಿಲ್ಲ… ಮತ್ತೆ ಮತ್ತೆ ರಮ್ಯಾ ಅದೇ ತಪ್ಪನ್ನು ಮಾಡುತ್ತಿದ್ದಾರೆ ಎಂಬುದು ಬಿಜೆಪಿಯವರ ಆಕ್ರೋಶವಾಗಿದೆ.. ಮತದಾನ ಮಾಡದೆ ಇರುವ ಈಕೆಗೆ ಪ್ರಧಾನಿಯವರ ಬಗ್ಗೆ ಮಾತನಾಡುವ ಬಗ್ಗೆ ಯೋಗ್ಯತೆ ಇಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.
Comments