ಶಾಸಕರ ಸಭೆಯಲ್ಲಿ ಕಾಣಿಸಿಕೊಂಡ ನಿಖಿಲ್..!! ಶಾಸಕರಿಗೆ ಮಾತ್ರ ಇದ್ದ ಸಭೆಯಲ್ಲಿ ನಿಖಿಲ್’ಗೇನು ಕೆಲಸ..!! ಹಾಗಾದ್ರೆ ಸಭೆಗೆ ಆಹ್ವಾನ ಕೊಟ್ಟಿದ್ದು ಯಾರು..?
ಲೋಕಸಮರ ಮುಗಿದ ಮೇಲೆ ನನ್ನೆಯಷ್ಟೆ ಜೆಡಿಎಸ್ ಶಾಸಕಾಮಗ ಸಭೆ ನಡೆದಿದೆ.. ಆ ಸಭೆಯಲ್ಲಿ ಮಂಡ್ಯ ಲೋಕಸಭಾ ಅಖಾಡದ ಮೈತ್ರಿ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು.. ಇದೀಗ ಈ ವಿಷಯ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.. ಈ ಸಭೆಗೆ ಬೇರೆಯವರಿಗೆ ಆಹ್ವಾನ ಇರುವುದಿಲ್ಲ... ಕೇಲವ ಶಾಸಕರಿಗೆ ಮಾತ್ರ ಆಹ್ವಾನವಿರುತ್ತದೆ.. ಆದರೆ ನಿಖಿಲ್ ಇನ್ನೂ ಜನನಾಯಕನೇ ಆಗಿಲ್ಲ.. ಆಗಲೇ ಸಭೆಗೆ ಹಾಜರಾಗಿರುವುದು ಕೆಲವು ಶಾಸಕರಿಗೆ ತಲೆಗೆ ಹುಳ ಬಿಟ್ಟಿಕೊಂಡಂತೆ ಆಗಿದ್ದಂತು ಸುಳ್ಳಲ್ಲ..
ಯಾವಾಗಲೂ ಕೂಡ ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು, ಮಂತ್ರಿಗಳು ಭಾಗಿಯಾಗುವುದು ಚಾಲ್ತಿಯಲ್ಲಿದೆ.. ಅಷ್ಟೆ ಅಲ್ಲದೆ ಬೇರೆಯವರಿಗೆ ಅಧಿಕೃತವಾಗಿ ಆಹ್ವಾನ ಇದ್ದರೆ ಮಾತ್ರ ಶಾಸಕರ ಸಭೆಯಲ್ಲಿ ಪಾಲ್ಗೊಳ್ಳಬಹುದು. ಪಕ್ಷದ ಇತರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಿಲ್ಲದೆ ಕೇವಲ ನಿಖಿಲ್ ಕುಮಾರಸ್ವಾಮಿ ಅವರೊಬ್ಬರೇ ಸಭೆಯಲ್ಲಿ ಪಾಲ್ಗೊಂಡಿದ್ದು ಇತರ ಶಾಸಕರಿಗೆ ಅಚ್ಚರಿ ಮೂಡಿಸಿತು. ಅವರೊಬ್ಬರಿಗೆ ಆಹ್ವಾನ ಇದ್ದುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಭ್ಯರ್ಥಿಯ ಎದುರೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾನದ ಗುಪ್ತಚರ ವರದಿ ಪ್ರಸ್ತಾಪಿಸಿ, ಶಾಸಕ, ಸಚಿವರೊಂದಿಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸುತ್ತಿವೆ.. ಮೊದಲೆ ಹೇಳಿದ್ದಂತೆ ಕೇವಲ ಶಾಸಕರಿಗೆ ಮಾತ್ರ ಅಲ್ಲಿ ಪ್ರವೇಶವಿರುತ್ತದೆ.. ನಿಖಿಲ್ ಗೆ ಆಹ್ವಾನ ಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಇದೀಗ ತಲೆದೂರಿದೆ.
Comments