ಸಾಲಮನ್ನಾ ಬೇಡ, ಬೆಂಬಲ ಬೆಲೆ ಕೊಡಿ ಸಾಕು ಎಂಬ ದರ್ಶನ್ ಹೇಳಿಕೆಗೆ ಟಾಂಗ್ ಕೊಟ್ಟ ಜೆಡಿಎಸ್ ನಾಯಕ..!!
ಮೊನ್ನೆ ಮೊನ್ನೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರಿಗೆ ಸಾಲಮನ್ನಾ ಬೇಡ, ಕನಿಷ್ಟ ಬೆಂಬಲ ಬೆಲೆ ಆದರೂ ಕೊಡಿ.. ಆಗ ಅವರ ಸಾಲವನ್ನು ಅವರೇ ತೀರಿಸಿಕೊಳ್ಳುತ್ತಾರೆ ಎಂದಿದ್ದರು.. ಇದೀಗ ಆ ಹೇಳಿಕೆಗೆ ಸಾಕಷ್ಟು ಪರ ವಿರೋಧಗಳು ವ್ಯಕ್ಯವಾಗಿವೆ.. ಸಿಎಂ ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ಹೇಳಿಕೆಯನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಖಂಡಿಸಿದ್ದಾರೆ.
ಇನ್ನೂ ಮಂಡ್ಯದ ಸಂಸದ ಶಿವರಾಮೇ ಗೌಡ ರು ಕೂಡ ದರ್ಶನ್ ಸಿಎಂ ಗೆ ಟಾಂಗ್ ಕೊಡಲು ಹೋಗಿ ನಗೆ ಪಾಟಲಿಗೆ ಸಿಲುಕಿದ್ದಾರೆ ಎಂಬ ವ್ಯಂಗ ಮಾತುಗಳನ್ನು ಆಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಇಡೀ ರಾಜ್ಯದ ರೈತ ಮುಖಂಡರ ಪರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಕೇಳುತ್ತಿದ್ದಾರೆ. ಆದ್ದರಿಂದ ಸಿನಿಮಾ ನಟರು ಕಾಲೇಜಿಗೆ ಹೋದರೆ ಕಾಲೇಜಿನ ವಿಚಾರವನ್ನು ಮಾತ್ರ ಮಾತನಾಡಬೇಕು. ಸುಮ್ಮನೆ ಚಪ್ಪಾಳೆ ಗಿಟ್ಟಿಸಿಸೋದಕ್ಕೆ ಸಿಎಂಗೆ ಟಾಂಗ್ ಕೊಡುವ ರೀತಿ ಬಣ್ಣದ ಮಾತುಗಳನ್ನು ಆಡುವುದು ವ್ಯಂಗ್ಯವಾಗಿ ಇರುತ್ತದೆ ಎಂದರು. ಮೊದಲು ರಾಜಕೀಯಕ್ಕೆ ಬರಬೇಕು ನಂತರ ಅಲ್ಲಿನ ಕಷ್ಟ ಸುಖ ತಿಳಿಯಬೇಕ.. ಆಮೇಲೆ ಮಾತನಾಡಬೆಕು ಎಂದಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಇವರೆಲ್ಲರೂ ಎಲ್ಲಿ ಹೋಗಿದ್ದರು. ಕುಮಾರಸ್ವಾಮಿ ಪ್ರತಿಯೊಬ್ಬರ ಮನೆಗೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಾಲಮನ್ನಾ ಮಾಡುವುದರ ಜೊತೆ ಬೆಂಬಲ ಬೆಲೆಯನ್ನು ಕೊಡುತ್ತಿದ್ದಾರೆ. ಇವರೆಲ್ಲರು ಚುನಾವಣೆಯಲ್ಲಿ ಸಿನಿಮಾ ರೀತಿ ಪ್ರಚಾರ ಮಾಡಿದ್ದಾರೆ. ಅಲ್ಲಿ ರೈತರ ಪರವಾಗಿ ಮಾತನಾಡಿದರೆ ನಡೆಯುತ್ತದೆ ಎಂದು ತಿಳಿದುಕೊಂಡಿದ್ದು, ಅದೇ ರೀತಿ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ ಎಂದು ಗರಂ ಆದರು.
Comments