‘ಲೋಕಸಮರ’ ಕ್ಕೆ ನಿಖಿಲ್ ಮತ್ತು ಸುಮಲತಾ ಖರ್ಚು ಮಾಡಿದ ಹಣವೆಷ್ಟು ಗೊತ್ತಾ..?

ಸದ್ಯ ಲೋಕಸಮರ ಮುಗಿದಿದೆ…. ಫಲಿತಾಂಶಕ್ಕಾಗಿ ಎಲ್ಲಾ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಲೋಕಸಮರಕ್ಕಾಗಿ ಹಣದ ಹೊಳೆ ಹರಿದಿದೆ.. ಚುನಾವಣೆಯ ಸಮಯದಲ್ಲಿ ಹಣ ಖರ್ಚು ಮಾಡುವುದು ಕಾಮನ್.. ವೋಟಿಗಾಗಿ ದಾರಾಳಾವಾಗಿ ಹಣವನ್ನು ಅಭ್ಯರ್ಥಿಗಳು ಖರ್ಚು ಮಾಡುತ್ತಾರೆ… ಇದಕ್ಕೆ ಪುಷ್ಟಿ ನೀಡುವಂತೆ ಚುನಾವಣೆ ಆಯೋಗ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿಯನ್ನು ಜಪ್ತಿ ಮಾಡಿದೆ ಎನ್ನಲಾಗಿದೆ.
ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ಮಾಹಿತಿ ನೀಡಿದ್ದಾರೆ.. ಸದ್ಯ ಖುಷಿ ಪಡುವ ವಿಚಾರವೆಂದರೆ ಆಯೋಗ ನಿಗದಿಪಡಿಸಿದ 70 ಲಕ್ಷ ರೂ. ಮಿತಿಯನ್ನು ಯಾರೂ ಕೂಡ ದಾಟಿಲ್ಲ. ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 33 ಲಕ್ಷ ರೂ. ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ.. ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 39 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ತೋರಿಸಿದ್ದಾರೆ. ಸದ್ಯ ಲೆಕ್ಕದ ವಿವರಣೆ ಇನ್ನೂ ಕೂಡ ಆಗಿಲ್ಲ.. ನಾಳೆ ವಿವರಣೆಯನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.. ಒಟ್ಟಿನಲ್ಲಿ ಮೇ 23 ಯಾವಾಗ ಬರುತ್ತದೆ ಎಂದು ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
Comments