ನಿಖಿಲ್ ಸೋತರೆ ಅದಕ್ಕೆ ಇವರೇ ಕಾರಣವಂತೆ..!!! ಸಿಎಂ ಕುಮಾರಸ್ವಾಮಿ ಹೀಗೆ ಹೇಳಿದ್ದು ಯಾರಿಗೆ..?

ಮಂಡ್ಯ ಲೋಕಸಭಾ ಚುನಾವಣೆಯ ಕಾವು ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ… ಲೋಕಸಮರದ ಫಲಿತಾಂಶ ಇನ್ನೂ ಬಂದೆ ಇಲ್ಲ… ಆಗಲೇ ಸೋಲು ಗೆಲುವಿನ ಲೆಕ್ಕಚಾರ ಹಾಕುತ್ತಿದ್ದಾರೆ… ಸುಮಲತಾ ಗೆದ್ದೆ ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸ ಎಲ್ಲರಲ್ಲಿಯೂ ಕೂಡ ಇದೆ.. ಆದರೆ ಯಾಕೋ ನಿಖಿಲ್ ಗೆಲ್ಲೋದು ಸಂಶಯ ಎನ್ನುವಂತೆ ನೋಡುತ್ತಿದ್ದಾರೆ.. ಹಾಗಾಗಿ ಗೆಲುವನ್ನು ನೋಡಲು ಮೇ 23ರ ವರೆಗೆ ಕಾಯಲೇಬೇಕಿದೆ.. ಇದರ ನಡುವೆ ಕುಮಾರಸ್ವಾಮಿ ಕೆಲವರಿಗೆ ಕರೆ ಮಾಡಿ ಮಾತನಾಡಿರುವುದು ಹೆಚ್ಚು ಸುದ್ದಿಯಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಒಂದು ವೇಳೆ ಸೋತರೇ ಅದಕ್ಕೇ ನೀವೇ ಹೊಣೆಯಾಗಬೇಕಾಗುತ್ತದೆ ಎಂದು ಮಂಡ್ಯದ ಮೂವರು ಶಾಸಕರಿಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಪೋನ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳೆದ ನಿನ್ನೆ ರಾತ್ರಿ ಮಂಡ್ಯದ ಮೂವರು ಶಾಸಕರಿಗೆ ದೂರವಾಣಿ ಕರೆ ಮಾಡಿದ್ದಾರೆ ಎನ್ನಲಾದ ಸಿಎಂ, ನಿಮ್ಮ ಮೂರು ಕ್ಷೇತ್ರಗಳಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸರಿಯಾಗಿ ಮತ ಬಿದ್ದಿಲ್ಲ ಎಂದು ಹೇಳಲಾಗುತ್ತಿದೆ… ಇದಕ್ಕೆ ನೀವು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಮನವೊಲಿಸಿಲ್ಲ ಎಂಬುದೇ ಆಗಿದೆ. ಹೀಗಾಗಿ ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲು ಹೊಂದಿದರೇ, ಅದಕ್ಕೆ ನೀವೇ ಕಾರಣವಾಗುತ್ತೀರಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ನಿಖಿಲ್ ಕುಮಾರಸ್ವಾಮಿಯವರಿಗೂ ಕೂಡ ನಿಖಿಲ್ ಸೋಲುತ್ತಾನೆ ಎಂಬ ಭಯಕಾಡುತ್ತಿರುವುದಂತೂ ಸುಳ್ಳಲ್ಲ…
Comments