ಒಂದು ಕಡೆ ಅಪ್ಪ ಕಾಂಗ್ರೆಸ್ ಪರ…!! ಮತ್ತೊಂದು ಕಡೆ ಮಗ ಬಿಜೆಪಿ ಪರ…!!!
ಲೋಕ ಸಮರವೇನೋ ಮುಗಿಯಿತು.. ಫಲಿತಾಂಶಕ್ಕಾಗಿ ಮೇ 23ರ ವರೆಗೆ ಕಾಯಬೇಕಾಗಿದೆ.. ನೆನ್ನೆಯಷ್ಟೆ ಪ್ರಧಾನಿ ಮೋಧಿಯವರು ನಾಮಪತ್ರ ಸಲ್ಲಿಸಿದ್ದಾರೆ…. ಅವರ ಹಿಂದೆ ಜನ ಸಾಗರವೋ ಜನಸಾಗರ…… ರಿಲಯನ್ಸ್ ಉದ್ಯಮಗಳ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅವರು ಮುಂಬೈ ಅಂಬಾನಿ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವೋರಾ ಅವರನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದು ಎಲ್ಲರಿಗೂ ಕೂಡತಿಳಿದೆ ಇದೆ…
ಆದರೆ ಇದೀಗ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ. ಒಂದು ಕಡೆ ಅಪ್ಪ ಕಾಂಗ್ರೆಸ್ ಪರ, ಮತ್ತೊಂದು ಕಡೆ ಮಗ ಬಿಜೆಪಿ ಪರ…ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಚುನಾವಣೆ ರ್ಯಾಲಿಯ ಮುಂದಿನ ಸೀಟಿನಲ್ಲಿ ಕುಳಿತಿದ್ದ ಅನಂತ್ ಅಂಬಾನಿ ಅವರು, ತಾನು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಬಂದಿದ್ದೇನೆ. ಅಲ್ಲದೆ, ನಾನು ದೇಶವನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದರು... ಈ ಮೂಲಕ ತಮ್ಮ ಬೆಂಬಲವನ್ನು ಬಿಜೆಪಿಗೆ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಮುಕೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದರೆ, ಅವರ ಪುತ್ರ ಅನಂತ್ ಬಿಜೆಪಿ ಬೆಂಬಲಿಸಿದಂತಾಗಿದೆ. ಒಂದೇ ಮನೆಯವರಾದರೂ ಸಪೋರ್ಟ್ ಮಾಡುತ್ತಿರುವುದಂತು ಬೇರೆ ಬೇರೆ ಪಕ್ಷಗಳಿಗೆ… ಇದನ್ನೆ ರಾಜಕೀಯ ಅನ್ನೋದು..
Comments