ಲೋಕಸಭಾ ಚುನಾವಣೆಯ ನಾಮಪತ್ರ ಹಿಂಪಡೆದ ಈ ಅಭ್ಯರ್ಥಿ ಒಂದು ನಯಾ ಪೈಸೆಯನ್ನು ತೆಗೆದುಕೊಂಡಿಲ್ಲವಂತೆ..!

ಲೋಕಸಮರ ಮುಗಿದರೂ ಕೂಡ ಅದರ ಸುದ್ದಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ… ತುಮಕೂರು ಅಖಾಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದಂತಹ ಸಂಸದ ಮುದ್ದೆಹನುಮಗೌಡ ದೀಡಿರ್ ಅಂತ ನಾಮಪತ್ರ ವಾಪಸ್ ಪಡೆದಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು…ಇದೀಗ ಬಿಡುಗಡೆಯಾಗಿರುವ ಆಡಿಯೋ ಅದಕ್ಕೆ ಪುಷ್ಟಿನೀಡುವಂತೆ ಇದೆ…
ನಾನು ದೇವರಾಣೆ ಯಾವುದೇ ದುಡ್ಡನ್ನು ನಾಮಪತ್ರ ಹಿಂಪಡೆಯಲು ತೆಗೆದುಕೊಂಡಿಲ್ಲ. ನನ್ನ ಕೈ ಶುದ್ದವಾಗಿದೆ ಎಂದು ವೈರಲ್ ಆದ ಆಡಿಯೋ ಬಗ್ಗೆ ಸಂಸದ ಮುದ್ದಹನುಮೇಗೌಡ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ತುಮಕೂರಿನ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಆಡಿಯೋದಲ್ಲಿ ಮಾತಾಡಿರುವ ಇಬ್ಬರು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿ ಆಗ ನಿಮಗೆ ಸತ್ಯ ತಿಳಿಯುತ್ತದೆ... ಏಕೆಂದರೇ ನಾನಾಗಲೀ ಅಥವಾ ಯಾವುದೇ ಜವಾಬ್ದಾರಿಯುತ ವ್ಯಕ್ತಿಯಾಗಲೀ ಆಡಿಯೋದಲ್ಲಿ ಮಾತನಾಡಲು ಸಾಧ್ಯವಿಲ್ಲ... ನಾನು ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನೂ ಒಂದೇ ಒಂದು ನಯಾ ಪೈಸೆ ದುಡ್ಡು ಪಡೆದಿಲ್ಲ. ಈ ಕೈನ ಬಹಳ ಶುದ್ದವಾಗಿಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಾನು ಸ್ವಯಂ ಇಚ್ಚೆಯಿಂದಲೇ ನಾಮಪತ್ರವನ್ನು ವಾಪಸ್ ಪಡೆದಿದ್ದು ನನಗೆ ಯಾವುದೇ ಒತ್ತಡ ಇರಲಿಲ್ಲ…ನಾನು ದುಡ್ಡನ್ನು ತೆಗೆದುಕೊಮಡು ನಾಮಪತ್ರವನ್ನು ಹಿಂಪಡೆದಿಲ್ಲ.. ನಾನು ಯಾರ ಬಳಿಯೂ ಕೂಡ ದುಡ್ಡನ್ನು ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು..
Comments