ಅಭಿಷೇಕ್ ಮತ್ತು ನಿಖಿಲ್ ಮಧ್ಯೆ ಮತ್ತೆ ಶುರುವಾಯ್ತ ವಾರ್..!! ಅಭಿ ಮಾತಿಗೆ ಟಾಂಗ್ ಕೊಟ್ಟ ನಿಖಿಲ್..!!!

ಲೋಕಸಮರದ ಹೊತ್ತಿನಲ್ಲಿ ಮಂಡ್ಯ ನಿಜಕ್ಕೂ ರಣರಂಗವಾಗಿದ್ದಂತೂ ಸುಳ್ಳಲ್ಲ… ಸಕ್ಕರೆಯಷ್ಟೆ ಸಿಹಿಯಾಗಿದ್ದ ಸ್ನೇಹದ ಮಧ್ಯದಲ್ಲೆ ನೊಣದ ರೀತಿ ಎಂಟ್ರಿ ಕೊಟ್ಟಿದ್ದು ಈ ರಾಜಕೀಯ..ಸಕ್ಕರೆನಾಡು ಮಂಡ್ಯದಲ್ಲಿ ಚುನಾವಣೆ ಮುಗಿದರೂ ಕೂಡ ಅದರ ಕಾವು ಇನ್ನೂ ಕಡಿಮೆಯಾಗಿಲ್ಲ.. ಒಬ್ಬರಿಗೆ ಒಬ್ಬರು ಟಾಂಗ್ ಕೊಡುತ್ತಲೆ ಇದ್ದಾರೆ.. ಇದೀಗ ಅಭಿ ಮತ್ತು ನಿಖಿಲ್ ಮಧ್ಯೆ ಮತ್ತೆ ವಾರ್ ಶುರುವಾಗಿದೆ..
ಚುನಾವಣೆ ಮುಗಿದ ನಂತರ ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿದ್ದಾರೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ.ಚುನಾವಣೆಯ ನಂತರ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಸಿಂಗಾಪುರ್‍ಗೆ ಹೋಗ್ತಾರೆ ಎಂಬ ಗಾಸಿಪ್‍ಗಳೂ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡಿದ್ದವು... ಈ ಗಾಸಿಪ್‍ಗೆಲ್ಲ ತಮ್ಮ ಪ್ರತಿಸ್ಪರ್ಧಿಗಳೇ ಕಾರಣ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಅಭಿಷೇಕ್ ಚುನಾವಣೆ ಮುಗಿದ ನಂತರ ಮಂಡ್ಯದ ಮಹಾವೀರ ಸರ್ಕಲ್‍ಗೆ ಬಂದು ಬೆಲ್ಲದ ಟೀ ಕುಡಿತೀನಿ ಅಂತಾ ಸವಾಲ್ ಕೂಡ ಹಾಕಿದ್ದರು. ಅದರಂತೆಯೇ ಚುನಾವಣೆ ಮುಗಿದ ನಂತರ ತಾವು ಹೇಳಿದಂತೆ ಮಹಾವೀರ ಸರ್ಕಲ್‍ನಲ್ಲಿ ಟೀ ಕುಡಿದು ನಾನು ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೀನಿ ಅಂತಾ ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದರು ಅಭಿಷೇಕ್ ಬೆಂಬಲಿಗರು ನಮ್ಮ ಅಂಬಿ ಅಣ್ಣನ ಮಗ ಇಲ್ಲೇ ಇದ್ದಾರೆ. ಕುಮಾರಣ್ಣನ ಪುತ್ರನೇ ಚುನಾವಣೆ ಮುಗಿಸಿ ವಿದೇಶಕ್ಕೆ ಹೋಗಿದ್ದಾರೆ ಅಂತಾ ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಾತನಾಡಲು ಶುರು ಮಾಡಿದರು... ಇಷ್ಟೆಲ್ಲ ನಡೆದ ಮೇಲೆ ಏಕಾಏಕಿ ಮಂಡ್ಯದಲ್ಲಿ ಕಾಣಿಸಿಕೊಂಡ ನಿಖಿಲ್, ನಾನು ರಾಜ್ಯ ಬಿಟ್ಟು ಎಲ್ಲೂ ಹೋಗಿಲ್ಲ. ನನ್ನ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಹಬ್ಬಿಸೋದನ್ನ ನನ್ನ ವಿರೋಧಿಗಳು ಇನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ ನಾನು ಈ ಹಿಂದೆ ಹೇಳಿದಂತೆ ಮಂಡ್ಯದಲ್ಲೇ ಜಮೀನು ಖರೀದಿಸಿ, ಮನೆ ಕಟ್ಟಿ ವಾಸ ಮಾಡುತ್ತೇನೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಈ ರಾಜಕೀಯ ಎಂಬ ದೊಂಬರಾಟದಿಂದ ಯಾರು ಯಾವಾಗ ಸ್ನೇಹಿತರಾಗುತ್ತಾರೋ, ಇಲ್ಲ ಶತ್ರುಗಳು ಆಗುತ್ತಾರೊ ಗೊತ್ತಿಲ್ಲ,,, ಒಟ್ಟಿನಲ್ಲಿ ಹಾಲು ಜೇನಿನಂತೆ ಇದ್ದ ಅಭಿ ಮತ್ತು ನಿಖಿಲ್ ಸದ್ಯ ಹಾವು ಮುಂಗುಸಿಯಂತೆ ಆಗಿದ್ದಾರೆ
Comments