ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ ಬಿಜೆಪಿ ಅಭ್ಯರ್ಥಿ..!!

ಲೋಕಸಭಾ ಚುನಾವಣೆಯು ಮುಗಿದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿವೆ.. ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರಗೊಂಡಿದ್ದಾರೆ. ಇದೀಗ ಬಿಜೆಪಿಯ ಅಭ್ಯರ್ಥಿಯೊಬ್ಬರು ಇದೇ ನನ್ನ ಕೊನೆಯ ಚುನಾವಣೆ ಎಂದು ತಿಳಿಸಿದ್ದಾರೆ.ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಇದೇ ನನ್ನ ಕಡೇ ಚುನಾವಣೆಯೆಂದು ಘೋಷಿಸಿದ್ದೇನೆ. 2024ಕ್ಕೆ ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಜಿಎಂ ಸಿದ್ದೇಶ್ವರ, ಅಭಿವೃದ್ಧಿ ಮಾಡುವುದೆ ಒಂದೇ ನನ್ನ ಗುರಿ..ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕು, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು, ಪರ್ಟಿಲೈಸರ್ ಫ್ಯಾಕ್ಟರಿ, ಸೆಕೆಂಡ್ ಜನರೇಷನ್ ಎಥೆನಾಲ್ ಘಟಕ ಸ್ಥಾಪನೆ, ದಾವಣಗೆರೆ ರೈಲ್ವೆ ನಿಲ್ದಾಣ ಅಭಿವೃದ್ಧಿ, 2 ರೈಲ್ವೇ ಗೇಟ್ಗಳ ಸಮಸ್ಯೆಗೆ ಮುಕ್ತಿ, ಇಎಸ್ ಐ ಆಸ್ಪತ್ರೆ ಕಟ್ಟಡ ನಿರ್ಮಾಣ, ಜಿಲ್ಲಾಸ್ಪತ್ರೆಯಲ್ಲಿ 25 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸ, 11 ಕೋಟಿ ವೆಚ್ಚದಲ್ಲಿ ಹಳೆ ಹೆರಿಗೆ ಆಸ್ಪತ್ರೆಯ ಅಭಿವೃದ್ಧಿ ನನ್ನ ಗುರಿಯಾಗಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.... ಅಷ್ಟೆ ಅಲ್ಲದೆ ಮೇ 23ರ ವೇಳೆಗೆ ದೋಸ್ತಿ ಸರ್ಕಾರ ಇರುವುದಿಲ್ಲವೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ರಮೇಶ್ ಜಾರಕಿಹೊಳಿ ಸಹ ಇದೇ ಮಾತು ಆಡುತ್ತಿದ್ದಾರೆ. ನೋಡೋಣ ಏನು ಆಗುತ್ತದೆಯೋ ಎಂದು ಹೇಳಿದರು. ಒಟ್ಟಾರೆಯಾಗಿ ಮೇ 23 ರಂದು ಬರುವ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾಯುತ್ತಿದ್ದಾರೆ. ಯಾರ ಕೊರಳಿಗೆ ಹೂ ಮಾಲೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments