ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲವಂತೆ..!! ಹಾಗಾದ್ರೆ ಅಭ್ಯರ್ಥಿಗಳ್ಯಾರು..? ಈ ಬಗ್ಗೆ ದೇವೆಗೌಡರು ಹೇಳಿದ್ದೇನು..?

ಇತ್ತಿಚಿಗಷ್ಟೆ ಲೋಕಸಭಾ ಚುನಾವಣೆಯು ಮುಗಿದಿದೆ… ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಎದುರು ನೋಡುತ್ತಿದ್ದಾರೆ..ಮೇ 23 ಕ್ಕೆ ಲೋಕಸಮರದ ಫಲಿತಾಂಶ ಹೊರಬೀಳಲಿದ್ದು ಯಾವ ಯಾವ ಕ್ಷೇತ್ರದಲ್ಲಿ ಯಾರ್ಯಾರು ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾರೆ ಎಂಬುದು ತುಂಬಾ ಕುತೂಹಲದ ವಿಷಯವಾಗಿದೆ. ಈ ನಿಟ್ಟಿನಲ್ಲಿ ದೋಸ್ತಿಗಳು ನಾವೇ ಗೆಲ್ಲುವುದು ಎಂಬ ಆತ್ಮ ವಿಶ್ವಾಸವನ್ನು ಹೊರಹಾಕಿದ್ದಾರೆ.
ಇದೀಗ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೇವೆಗೌಡರು ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರು. ಹೀಗಾಗಿ ಕಾಂಗ್ರೆಸ್ ನಿಂದಲೇ ಅಭ್ಯರ್ಥಿಗಳು ಅಖಾಡಕ್ಕೆ ಇಳಿಯುತ್ತಾರೆ. ಮೈತ್ರಿ ಧರ್ಮ ಪಾಲಿಸುವ ನಿಟ್ಟಿನಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದೆ ಎಂದು ತಿಳಿಸಿದರು. ಮೇ 23 ಕ್ಕೆ ಬರುವ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಎದುರು ನೋಡುತ್ತಿದ್ದಾರೆ.
Comments