ದೋಸ್ತಿ ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್..!! ಯಾವಾಗ ಗೊತ್ತಾ..?

24 Apr 2019 1:07 PM | Politics
2251 Report

ಲೋಕಸಭಾ ಚುನಾವಣೆಯ ಕಾವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ… ನೆನ್ನೆಯಷ್ಟೆ  ರಾಜ್ಯದಲ್ಲಿ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ.. ಈಗಾಗಲೇ ಸಾಕಷ್ಟು ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಪಕ್ಷಾಂತರಗೊಳ್ಳುತ್ತಿದ್ದಾರೆ. ಇದರ ಹಿನ್ನಲ್ಲೇಯಲ್ಲಿಯೇ  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಪತನಕ್ಕೆ ಬಿಜೆಪಿ ನಾಯಕರು ಕಾರ್ಯಾಚರಣೆ ಶುರು ಮಾಡಿಕೊಂಡಿದ್ದಾರೆ..

ಮೊದಲೇ ಹೇಳಿದಂತೆ ಕೆಲವು ಶಾಸಕರು ಈಗಾಗಲೇ ಪಕ್ಷ ಬಿಟ್ಟಿದ್ದಾರೆ. .ಇದಕ್ಕೆ ಪೂರಕವೆಂಬಂತೆ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ತಾವು ಸದ್ಯದಲ್ಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಮಂಗಳವಾರ ನಡೆದಂತಹ  ಈ ದಿಢೀರ್ ರಾಜಕೀಯ ಬೆಳವಣಿಗೆ ಬಳಿಕ ಬಿಜೆಪಿ ಪಾಳಯದಲ್ಲಿ ಉತ್ಸಾಹ ಮೂಡಿರುವ ರೀತಿ ಕಾಣುತ್ತಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಬಹುತೇಕ ನಾಯಕರು ದೋಸ್ತಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ವಿಶ್ವಾಸಪೂರ್ಣ ಮಾತುಗಳನ್ನ ಆಡಿದ್ದಾರೆ.. ಇದಕ್ಕಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಮೇ 23 ನ್ನು ನಿಗದಿ ಮಾಡಲಾಗಿದೆ. ಫಲಿತಾಂಶ ಬಂದ ಕೂಡಲೆ ದೋಸ್ತಿ ಪತನಗೊಳ್ಳುತ್ತದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.

Edited By

Manjula M

Reported By

Manjula M

Comments