ಜೆಡಿಎಸ್‌ಗೆ ತಿರುಗೇಟು ನೀಡಲು ವಿಧಾನಸಭಾ ಚುನಾವಣೆಗೆ ಅಭಿಷೇಕ್ ಗೌಡ…! ಸ್ಪರ್ಧೆ ಎಲ್ಲಿಂದ ಗೊತ್ತಾ?

ಈಗಷ್ಟೆ ಲೋಕಸಭಾ ಚುನಾವಣೆಯ ಕಾವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.. ಇಂದು ಕೂಡ ಎರಡನೇ ಹಂತದ ಮತದಾನ ನಡೆಯುತ್ತಿದೆ.. ಆದರೆ ಫಲಿತಾಂಶ ಬರುವವರೆಗೂ ಕೂಡ ಅದರ ಕಾವು ಹಾಗೆಯೇ ಇರುತ್ತದೆ.. ಮಂಡ್ಯ ಅಖಾಡ ಮಾತ್ರ ಹೈವೋಲ್ಟೇಜ್ ಅಖಾಡವಾಗಿತ್ತು.. ಸಿಎಂ ಕುಮಾರಸ್ವಾಮಿಯವರ ಮಗ ನಿಖಿಲ್ ಹಾಗೂ ಸುಮಲತಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು… ಇದೀಗ ರೆಬಲ್ ಸ್ಟಾರ್ ಪುತ್ರ ಕೂಡ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯದ ದಿ.ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಷಿಯಲ್ ಮಿಡಿಯಾದಲ್ಲಿ ಕೆಲ ಪೋಸ್ಟರ್‌ಗಳು ವೈರಲ್ ಆಗಿದೆ. ಎಸ್… ಡಿ.ಸಿ. ತಮ್ಮಣ್ಣ ಯಾವುದಕ್ಕೂ ರೆಡಿ ಇರು. ಮುಂದೆ ನಿನ್ನ ಎದುರಾಳಿ ಅಭಿಷೇಕ್ ಅಂಬರೀಷ್, ತಾಕತ್ ಇದ್ರೆ ಫೇಸ್ ಮಾಡು ಎಂದು ಅಂಬರೀಷ್ ಅಭಿಮಾನಿಗಳು ಫೇಸ್ಬುಕ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ದೊಡ್ಡರಸಿನಕೆರೆ ಅಂಬರೀಷ್ ಅವರ ಹುಟ್ಟೂರು ಇದಲ್ಲದೇ ಸಾಕಷ್ಟು ಮಂದಿ ಅಂಬರೀಶ್ ಅಭಿಮಾನಿಗಳು ಹಾಗೂ ಅಂಬರೀಶ್ ಸಂಬಂಧಿಕರು ಇರುವ ಕಾರಣದಿಂದ ಇಲ್ಲಿಂದಲೇ ತಮ್ಮ ರಾಜಕೀಯ ಜರ್ನಿಯನ್ನು ಶುರುಮಾಡುವುದಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ರಾಜಕೀಯದಲ್ಲಿ ಬೆಳೆಯಲು ಜ್ಞಾನದ ಜೊತೆಗೆ ಬುದ್ದಿವಂತಿಕೆಯು ಕೂಡ ಬೇಕು.. ಅಪ್ಪನ ರಾಜಕೀಯದ ರಕ್ತ ಮಗನ ದೇಹದಲ್ಲೂ ಕೂಡ ಹರಿಯುತ್ತಿದೆ.. ಹಾಗಾಗಿ ಅಭಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಕೂಡ ನೋ ಡೌಟ್…
Comments