ನಿಖಿಲ್ ಸೋತರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದ ಈ ಪ್ರಭಾವಿ ಜೆಡಿಎಸ್ ಸಚಿವ..!!
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಡ್ಯ ಅಖಾಡ ಹೆಚ್ಚು ಕುತೂಹಲವನ್ನು ಕೆರಳಿಸಿತ್ತು... ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ದೋಸ್ತಿ ಅಭ್ಯರ್ಥಿ ನಿಖಿಲ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು... ಚುನಾವಣೆಯೇನೋ ಮುಗಿದಿದೆ... ಆದರೆ ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಿದೆ.. ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತರೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.
ಮಂಡ್ಯದ ಎಂಟು ಕ್ಷೇತ್ರಗಳಲ್ಲಿಯೂ ಸುತ್ತಾಡಿದ್ದು, ಎಲ್ಲಾ ಕಡೆ ನಿಖಿಲ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎದುರಾಳಿ ಸುಮಲತಾ ಅಂಬರೀಷ್ ವಿರುದ್ಧವಾಗಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿ ಎಸ್ ಪುಟ್ಟರಾಜು ಹೇಳಿದ್ದಾರೆ.. ಸುಮಲತಾ ಸಿನಿಮಾದಲ್ಲಿ ಹೇಗೆ ನಟನೆ ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಉತ್ತಮ ನಟನೆ ಮಾಡಿದ್ದಾರೆ. ಅವರ ನಟನೆಗೆ ಮಂಡ್ಯ ಜನರು ಮರಳಾಗುವುದಿಲ್ಲ, ಚೆಲುವರಾಯಸ್ವಾಮಿ ಯಾರ ಪರವಾಗಿ ಕೆಲಸ ಮಾಡಿದ್ದಾರೋ, ಅವರೆಲ್ಲರೂ ಸೋತಿದ್ದಾರೆ. ಅದೇ ರೀತಿ ಸುಮಲತಾ ಕೂಡ ಸೋಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ..,ಯಾರೂ ಏನೇ ಹೇಳಿದ್ದರೂ ನಿಖಿಲ್ ಅವರು ಗೆದ್ದೆ ಗೆಲುತ್ತಾರೆ ಒಂದು ವೇಳೆ ಗೆಲ್ಲದಿದ್ದರೆ ರಾಜಕೀಯಕ್ಕೆ ನಿವೃತ್ತಿ ಘೋಷಿಸುವುದಾಗಿ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ. ಒಟ್ಟಾರೆಯಾಗಿ ಮಂಡ್ಯದಲ್ಲಿ ಚುನಾವಣೆ ಮುಗಿದರು ಕೂಡ ಇನ್ನೂ ಸುದ್ದಿಯಾಗುತ್ತಲೆ ಇದೆ.. ಮಂಡ್ಯ ಜನತೆಯ ಒಲವು ಯಾರ ಕಡೆ ವಾಲಿದೆ ಎಂಬುದು ಮೇ 23 ಕ್ಕೆ ಗೊತ್ತಾಗಲಿದೆ.
Comments