ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ್ರ ಸುಮಲತಾ..!!

ಲೋಕಸಭಾ ಚುನಾವಣೆಯ ಕಾವು ಇದೀಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.. ಆದರೂ ಚುನಾವಣೆಯ ಫಲಿತಾಂಶ ಬರುವವರೆಗೂ ಅಭ್ಯರ್ಥಿಗಳು ರಣಹದ್ದುಗಳ ರೀತಿ ಕಾಯುತ್ತಿರುತ್ತಾರೆ...ಮಂಡ್ಯ ಅಖಾಡ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು..ಚುನಾವಣೆ ನಡೆಯುತ್ತಿರುದು ಇಂಡಿಯಾದಲ್ಲೋ ಮಂಡ್ಯದಲ್ಲೋ ಎನ್ನುವ ರೀತಿ ಆಗಿ ಬಿಟ್ಟಿತ್ತು.. ಚುನಾವಣೆಯ ಕಾವು ಮುಗಿದರೂ ಮಂಡ್ಯದಲ್ಲಿ ಮಾತ್ರ ಇನ್ನೂ ಹಾಗೆಯೇ ಇದೆ. ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಚುನಾವಣೆ ಬಳಿಕ ಸುಮಲತಾ ಮತ್ತೆ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದು, ಸೋಲಿನ ಹತಾಶೆಯಿಂದ ಆರೋಪ ಮಾಡಿರುವ ಸಂದೇಹ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯದಲ್ಲಿ ಚುನಾವಣೆಯು ಮುಗಿದಿದ್ದು ಎಲ್ಲರೂ ಕೂಡ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಚುನಾವಣೆ ನಂತರ ಮೊದಲ ಸುದ್ದಿಗೋಷ್ಠಿಯಲ್ಲೂ ಕೂಡ ಸುಮಲತಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಚುನಾವಣೆಯಲ್ಲಿ ಬೆಂಬಲ ನೀಡಿದಂತಹ ಆಪ್ತರನ್ನು ಸಿಎಂ ಟಾರ್ಗೆಟ್ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನನ್ನ ಪರ ಪ್ರಚಾರ ಮಾಡಿದವರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ನನ್ನ ಆಪ್ತರಿಗೆ ತೊಂದರೆ ಕೊಟ್ಟರೆ, ನಾನು ಇಷ್ಟಕ್ಕೆ ಸುಮ್ಮನೆ ಕೂರುವುದಿಲ್ಲ. ನನ್ನ ಬೆಂಬಲಕ್ಕೆ ನಿಂತ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ನಟ ಯಶ್ ರವರಿಗೂ ಬೆದರಿಕೆ ಹಾಕುತ್ತಿದ್ದಾರೆ. ಸಿಎಂ ಯಾವ ಅರ್ಥದಲ್ಲಿ ಪ್ರಾಯಶ್ಚಿತ್ತದ ಮಾತು ಹೇಳಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಅಲ್ಲದೆ ಇದಕ್ಕೆ ಕುಮಾರಸ್ವಾಮಿರವರು ಸ್ಪಷ್ಟನೆ ನೀಡುವವರೆಗೂ ನಾವು ಬಿಡುವುದಿಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಸೋಲಿನ ಭೀತಿಯಲ್ಲಿ ಸುಮಲತಾ ಅಂಬರೀಶ್ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎನ್ನಲಾಗುತ್ತದೆ.. ರಣರಂಗವಾಗಿ ಮಂಡ್ಯ ಅಖಾಡ ಫಲಿತಾಂಶ ಬರುವವರೆಗೂ ಕೂಡ ಆಗೆಯೇ ಇರುತ್ತದೆ.. ದೋಸ್ತಿ ನಾಯಕರು ಸುಮಲತಾ ಅವರಿಗೆ ಸೋಲಿನ ಭೀತಿ ಎದುರಾಗಿದೆ.. ಹಾಗಾಗಿ ಈಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
Comments