ಸಿಎಂ ಗೆ ಹೊಸ ಸವಾಲು ಹಾಕಿ... ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಹೇಳಿದ ಬಿಜೆಪಿ ನಾಯಕ..!!!
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮೊದಲನೇ ಹಂತದ ಚುನಾವಣೆಯು ಮುಗಿದಿದೆ.. ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ...ಇದೆಲ್ಲದರ ನಡುವೆ ರಾಜಕೀಯದಲ್ಲಿ ವಾಕ್ಸಮರಗಳು ಕೂಡ ಜೋರಾಗಿಯೇ ನಡೆಯುತ್ತಿವೆ...ಇದೇ ಹಿನ್ನಲೆಯಲ್ಲಿ ಬಿಜೆಪಿಯ ನಾಯಕ ರಾಜಕೀಯ ಸನ್ಯಾಸತ್ವದ ಬಗ್ಗೆ ಮಾತನಾಡಿದ್ದಾರೆ.
ಬಿಜೆಪಿ ನಾಯಕ ಶ್ರೀ ರಾಮುಲು ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹೊಸ ಸವಾಲನ್ನು ಹಾಕಿದ್ದಾರೆ. ತಮ್ಮ ಮೇಲೆ ಒಂದೇ ಒಂದು ಆರೋಪವನ್ನು ತೋರಿಸಿದಲ್ಲಿ ರಾಜಕೀಯ ಸನ್ಯಾಸತ್ವ ಪಡೆಯುವುದಾಗಿ ತಿಳಿಸಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಬುದ್ದಿ ಇಲ್ಲ, ನನ್ನ ವಿರುದ್ಧ ಮಾತನಾಡುವಾಗ ಹುಷಾರಾಗಿ ಮಾತನಾಡಲಿ ಎಂದು ಶ್ರೀರಾಮುಲು ಸಿಎಂ ಹಾಗೂ ದೋಸ್ತಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಅಲ್ಲದೇ ಮೈತ್ರಿ ನಾಯಕರು ಪಾಕಿಸ್ತಾನದ ಏಜೆಂಟರ್ ಗಳ ಥರ ವರ್ತನೆ ಮಾಡುತ್ತಿದ್ದಾರೆ. ಮಾಡ್ತಿದ್ದಾರೆ, ಸೋಲಿನ ಭೀತಿ ಎದುರಾಗಿದ್ದು, ಹತಾಶರಾಗಿದ್ದಾರೆ ಎಂದರು. ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಿ ಮಾತಿನ ಚಕಮಕಿ ಜೋರಾಗಿಯೇ ಇದೆ..ಮೇ 23 ರ ವರೆಗೆ ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಕಾಯಲೇ ಬೇಕಾಗುತ್ತದೆ... ತದ ನಂತರ ಯಾರು ಇನ್ಯಾರಿಗೆ ಟಾಂಗ್ ಕೊಡುತ್ತಾರೋ ಕಾದು ನೋಡಬೇಕಿದೆ.
Comments