ಬಿಜೆಪಿ ಗೆ ಸೇರಿ ಕೊಳ್ತಾರ ಕಾಂಗ್ರೆಸ್'ನ ಈ ಪ್ರಭಾವಿ ನಾಯಕ..!!

ಲೋಕಸಭಾ ಚುನಾವಣೆಯ ಹೊತ್ತಿನಲ್ಲಿಯೇ ಸಾಕಷ್ಟು ಶಾಸಕರು ಪಕ್ಷಾಂತರ ಮಾಡಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ. ಚುನಾವಣೆಯ ಹೊತ್ತಿಯಲ್ಲಿಯೇ ಈ ರೀತಿ ಮಾಡುತ್ತಿರುವುದು ಪಕ್ಷಗಳ ಮೇಲೆ ಪ್ರಭಾವ ಬೀರುವುದು ಕಾಮನ್...ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷ ಬಿಟ್ಟುಕ್ಕೆ ಜಿಗಿಯುವ ಪರ್ವ ಜೋರಾಗಿಯೇ ನಡೆಯುತ್ತಿದೆ.. ಇದೀಗ ಮತ್ತೊಬ್ಬ ಶಾಸಕರು ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ತೊರೆದು ರಮೇಶ್ ಜಾರಕಿಹೊಳಿ ಅವರುಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಗೋಕಾಕ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಪಾಲ್ಗೊಳ್ಳುತ್ತಿಲ್ಲ. ಚುನಾವಣೆ ಪ್ರಚಾರದಿಂದಲೂ ಸಹ ದೂರ ಉಳಿದಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷ ಬಿಡುವುದಾಗಿ ರಮೇಶ್ ಹಲವು ಸಲ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ರಮೇಶ್ ಗೆ ಪರ್ಯಾಯ ಅಭ್ಯರ್ಥಿ ನಮ್ಮ ಬಳಿ ಇದ್ದಾರೆ. ಹೀಗಾಗಿ ಜಿಲ್ಲೆಯ ಕಾರ್ಯಕರ್ತರನ್ನು ಒಟ್ಟಾಗಿ ಕರೆದೊಯ್ಯುವ ಹೊಣೆ ನನ್ನ ಮೇಲಿದೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪರ ಕೆಲಸ ಮಾಡುತ್ತಿರುವ ಸಂಗತಿ ಕೂಡ ನಮ್ಮ ನಾಯಕರಿಗೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಒಬ್ಬೊಬ್ಬರೆ ಪಕ್ಷ ಬಿಡುತ್ತಿರುವುದು ದೋಸ್ತಿಗಳಿಗೆ ಬಿಗ್ ಶಾಕ್ ಆದಂತೆ ಆಗಿದೆ.
Comments