ಮಗನ ಬಗ್ಗೆ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ್ರಾ ಸಿಎಂ ಕುಮಾರಸ್ವಾಮಿ..!!

ಮೊನ್ನೆಮೊನ್ನೆಯಷ್ಟೆ ಲೋಕಸಭಾ ಚುನಾವಣೆಯ ಕಾವು ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿದೆ...ಕೆಲವು ತಿಂಗಳಿಂದ ನಡೆಯುತ್ತಿದ್ದ ವಾದ ವಿವಾದಕ್ಕೆ ತೆರೆ ಎಳೆದಿದೆ..ಆದರೂ ಚುನಾವಣೆಯ ಎರಡನೇ ಹಂತ ಇನ್ನೂ ಬಾಕಿ ಇದೆ.. ಮೇ 23 ಕ್ಕೆ ಬರುವ ಫಲಿತಾಂಶಗಳಿಗಾಗಿ ಅಭ್ಯರ್ಥಿಗಳು ಹಾಗೂ ಮತದಾರರು ಕಾಯುತ್ತಿದ್ದಾರೆ.. ಹೀಗಿರುವಾಗ ಚುನಾವಣೆಯ ದಿನದಂದೆ ಕುಮಾರಸ್ವಾಮಿಯವರು ಮಾತನಾಡಿರುವ ಮಾತು ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಮೊನ್ನೆಯಷ್ಟೆ ರಾಮನಗರ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಸಿಎಂ ಹೆಚ್ ಡಿಕೆ ಸುದ್ದಿಗಾರರ ಜೊತೆ ಮಾತನಾಡಿರುವುದು ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರಾ ಎಂಬ ಸಣ್ಣ ಅನುಮಾನ ಇದೀಗ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನೀಡಿರುವ ಹೇಳಿಕೆಯ ವಿಡಿಯೋ ತುಣುಕನ್ನ ಒದಗಿಸುವಂತೆ ಚುನಾವಣಾ ಆಯೋಗ ಕೋರಿದೆ ಎಂದು ಹೇಳಲಾಗುತ್ತಿದೆ.. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿರುವ ನಿಖಿಲ್ ಕುಮಾರಸ್ವಾಮಿಯ ವಿರುದ್ಧ ಬಿಜೆಪಿಯ ಕುಟುಂಬ ರಾಜಕಾರಣದ ಟೀಕಾಸ್ತ್ರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿ ತಿಳಿಸಿದರು.ಈ ಮಧ್ಯೆ ಚುನಾಚಣಾ ಆಯೋಗ ಮತಗಟ್ಟೆಯ 100 ಮೀಟರ್ ಒಳಗಡೆ ರಾಜಕೀಯ ನಾಯಕರು ಅಥವಾ ಅಭ್ಯರ್ಥಿಗಳು ಮಾಧ್ಯಮಕ್ಕೆ ಹೇಳಿಕೆ ನೀಡುವುದು ಅಥವಾ ಪ್ರಚಾರ ಮಾಡುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ. ಆದರೆ ಕುಮಾರಸ್ವಾಮಿ ಮತಗಟ್ಟೆ ಹೊರಗೆ ಹೇಳಿಕೆ ನೀಡಿರುವ ವಿಡಿಯೋ ತುಣುಕನ್ನ ಆಯೋಗ ಕೇಳಿರುವುದು ಆಶ್ಚರ್ಯ ಮೂಡಿಸಿದೆ. ಒಂದು ವೇಳೆ ಆ ವಿಡಿಯೋ ತುಣುಕು ಚುನಾವಣಾ ಆಯೋಗಕ್ಕೆ ಸಿಕ್ಕರೆ ಸಿಎಂ ಕುಮಾರ ಸ್ವಾಮಿಯವರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments