ಜೆಡಿಎಸ್'ಗೆ ಬಿಗ್ ಶಾಕ್..!! ಜೆಡಿಎಸ್ ನ 80 ಕ್ಕೂ ಹೆಚ್ಚು ಮಂದಿ ಬಿಜೆಪಿಗೆ..!!!

ಅಭ್ಯರ್ಥಿಗಳಿಗೆ ಕೈ ಕೊಟ್ಟು ಸಾಕಷ್ಟು ಶಾಸಕರು ಬಿಜೆಪಿ ಗೆ ಸೇರಿಕೊಂಡಿದ್ದರು.. ಇದರಿಂದ ದೋಸ್ತಿ ಮುಖಭಂಗವಾಗಿತ್ತು.. ಆದರೆ ಇದೀಗ ಮತ್ತೊಮ್ಮೆ ಅದೇ ಆಗಿದೆ. ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ಮೈತ್ರಿ ಪಕ್ಷಕ್ಕೆ ಬಿಜೆಪಿ ಶಾಕ್ ಕೊಟ್ಟಿದೆ. ರಾತ್ರಿ ಬೆಳಗಾಗುವುದರೊಳಗೆ 80ಕ್ಕೂ ಹೆಚ್ಚು ದಳಪತಿಗಳು ಬಿಜೆಪಿಗೆ ಸೇರಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಹೊತ್ತಿನಲ್ಲಿಯೇ ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಲಸ ಜೋರಾಗಿ ನಡೆಯುತ್ತಿದೆ.ಈಗಾಗಲೇ ದೋಸ್ತಿ
ಜೆಡಿಎಸ್ ನ ಖಾಂಡ್ಯಾ ಹೋಬಳಿಯ ಸಂದೇಶ್ ಗೌಡ ಸೇರಿದಂತೆ ತಾಲೂಕು ಹಾಗೂ ಹೋಬಳಿ ಮಟ್ಟದ ಜೆಡಿಎಸ್ ಮುಖಂಡರು ಈಗಾಗಲೇ ಬಿಜೆಪಿಗೆ ಸೇರಿಕೊಂಡಿದ್ದಾರೆ.. ಚುನಾವಣೆಗೆ ಒಂದು ಬಾಕೀ ಇರುವಾಗಲೇ ಜೆಡಿಎಸ್ ಗೆ ಬಿಗ್ ಶಾಕ್ ನೀಡಲಾಗಿದೆ. ಶೃಂಗೇರಿಯ ಮಾಜಿ ಶಾಸಕ ಜೀವರಾಜ್ ನೇತೃತ್ವದಲ್ಲಿ ಬೂತ್ ಮಟ್ಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಹುತೇಕ ಮಂದಿ ಬಿಜೆಪಿಗೆ ಸೇರಿದ್ದಾರೆ. ಒಟ್ಟಾರೆಯಾಗಿ ಚುನಾವಣೆಗೆ ಒಂದೇ ಒಂದು ದಿನ ಬಾಕಿ ಉಳಿದಿದೆ.. ಈ ಸಮಯದಲ್ಲಿ ದೋಸ್ತಿಗಳಿಗೆ ನಾಯಕರು ಕೈ ಕೊಡುತ್ತಿರುವುದು ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ.
Comments