ಏನಿದು ಗೌಡರೇ...! ನೀವು ಮಾಡುತ್ತಿರುವುದು ಸರೀನಾ..!! ಆ ಮಗುವಿಗೆ ನಿಮ್ಮ ಮರಿ ಮೊಮ್ಮಕ್ಕಳ ವಯಸ್ಸು..!!! ದೊಡ್ಡಗೌಡರಿಗೆ ಹೀಗೆ ಹೇಳಿದ್ಯಾಕೆ..?

ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ.. ಈ ನಡುವೆ ಅಭ್ಯರ್ಥಿಗಳ ನಡುವೆ ಪ್ರಚಾರವು ಕೂಡ ಭರ್ಜರಿಯಾಗಿ ನಡೆಯುತ್ತಿದೆ.. ಇದರ ನಡುವೆ ಕೆಲ ಪಕ್ಷಗಳು ತಮಗೆ ಗೊತ್ತಿಲ್ಲದ ರೀತಿಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತಾರೆ..ಇದೀಗ ಜೆಡಿಎಸ್ ಕೂಡ ಈ ರೀತಿಯ ತಪ್ಪನ್ನು ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಂತೆ ಆಗಿದೆ...ಜೆಡಿಎಸ್ ಪ್ರಚಾರ ಮಾಡುವ ಸಮಯದಲ್ಲಿ ಒಂದು ತಪ್ಪನ್ನು ಮಾಡಿದೆ. ಆ ತಪ್ಪು ಇದೀಗ ವಿರೋಧ ಪಕ್ಷಗಳ ಬಾಯಿಗೆ ಆಹಾರವಾದಂತೆ ಆಗಿದೆ.
ಜೆಡಿಎಸ್ ಚುನಾವಣಾ ಪ್ರಚಾರದ ವೇಳೆ ತಮ್ಮ ಮರಿ ಮೊಮ್ಮೊಗಳ ವಯಸ್ಸಿನ ಬಾಲಕಿಯೊಬ್ಬಳನ್ನು ಹೊರೆ ಹೊತ್ತ ರೂಪದರ್ಶಿ ತರ ಮಾಜಿ ಪ್ರಧಾನಿ ದೇವೇಗೌಡರು ಬಳಸಿಕೊಂಡಿರುವುದು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ರಾಜಕೀಯದ ಪರಿವೇ ಇಲ್ಲದ ಮುಗ್ಧ ಮನಸ್ಸಿನ ಮಕ್ಕಳನ್ನು ಹೀಗೆ ಪ್ರಚಾರದ ವೇಳೆಯಲ್ಲಿ ಬಳಸಿಕೊಳ್ಳುವ ಪರಿ ಸರಿಯಲ್ಲ.ಪಕ್ಷ ಯಾವುದೇ ಇರಬಹುದು,..ಇಂಥ ಮಕ್ಕಳ ಬಳಕೆ ಅಪರಾಧ. ಮಕ್ಕಳ ಹಕ್ಕುಗಳ ರಕ್ಷಣೆ,ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆ ಇದಕ್ಕೆ ಅನ್ವಯ ಆಗುವುದಿಲ್ಲವೇ ಎಂಬ ಪ್ರಶ್ನೆಗಳು ವಿರೋಧ ಪಕ್ಷದಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಮಕ್ಕಳ ಆಯೋಗ ಯಾವ ರೀತಿ ಕ್ರಮ ಕೈ ಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments