ಪ್ರಧಾನಿ ಮೋದಿಯವರಿಗೆ ಸವಾಲಾಕಿದ ಮಾಜಿ ಸಿಎಂ ಸಿದ್ದು..!! ಏನಂತ ಗೊತ್ತಾ..?

13 Apr 2019 10:18 AM | Politics
333 Report

ಲೋಕಸಮರದ ಜೊತೆ ಜೊತೆಗೆ ವಾಕ್ ಸಮರವೂ ಕೂಡ ರಾಜಕೀಯ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ.. ಪ್ರಚಾರದ ವೇಳೆ ಒಬ್ಬರಿಗೆ ಒಬ್ಬರು ಟಾಂಗ್ ಕೊಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ ಒಂದಿಷ್ಟು ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದಾರೆ.. ಲೋಕಸಭಾ ಅಖಾಡದಲ್ಲಿ ಗೆಲ್ಲಲ್ಲೇ ಬೇಕು ಎಂದು ಪಕ್ಷಗಳೂ ಬಿಸಿಲನ್ನು ಕಾಣದೇ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ನಡುವೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಸವಾಲ್ ವೊಂದನ್ನು ಹಾಕಿದ್ದಾರೆ.

ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಚಾಲೆಂಜ್ ವೊಂದನ್ನು ಹಾಕಿದ್ದಾರೆ.ಟ್ವೀಟ್ ಮೂಲಕ ಚಾಲೆಂಗ್ ಹಾಕಿರುವ ಸಿದ್ದರಾಮಯ್ಯ ಅವರು ಮೋದಿ ಅವರಿಗೆ ವಾರಣಾಸಿಯಲ್ಲಿ ಸ್ಪರ್ಧಿಸಿರುವ ಸೈನಿಕನನ್ನು ಬೆಂಬಲಿಸಿ ಸ್ಪರ್ಧೆಯಿಂದ ಹಿಂದೆ ಸರಿಯಿರಿ ಎಂದು ಸವಾಲೆಸೆದಿದ್ದಾರೆ. ನಿಮಗೆ ನಿಜವಾಗಿಯೂ ಸೈನ್ಯ ಮತ್ತು ಸೈನಿಕರ ಬಗ್ಗೆ ಗೌರವವಿದ್ದರೆ ನಿಮ್ಮ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿರುವ ಸೈನಿಕ ತೇಜ್ ಬಹದ್ದೂರ್ ಅವರನ್ನು ಬಹಿರಂಗವಾಗಿ ಬೆಂಬಲಿಸಿ, ಚುನಾವಣೆಯಿಂದ ಹಿಂದೆ ಸರಿಯಿರಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಒಟ್ಟಾರೆಯಾಗಿ ಇದನ್ನು ನೋಡುತ್ತಿದ್ದರೆ ಸಿದ್ದರಾಮಯ್ಯನವರು ಸೈನಿಕರನ್ನು ಮುಂದಿಟ್ಟುಕೊಂಡು ಬಿಜೆಪಿ ಸ್ಪರ್ಧಿಗೆ ಅಖಾಡದಿಂದ ಹಿಂದೆ ಸರಿಯುವಂತೆ ಪರೋಕ್ಷವಾಗಿ ಹೇಳುತ್ತಿದ್ದಾರೆ ಅನಿಸುತ್ತಿದೆ.. ಕೆಲ ದಿನಗಳ ಹಿಂದಷ್ಟೆ ಸೈನಿಕರ ಬಗ್ಗೆ ಕುಮಾರಸ್ವಾಮಿಯವರು ಆಡಿದ ಮಾತು ಬಾರೀ ಚರ್ಚೆಗೆ ಒಳಪಟ್ಟಿತ್ತು.

Edited By

Manjula M

Reported By

Manjula M

Comments