ಲೋಕಸಮರ ಹೊತ್ತಿನಲ್ಲೆ ಜೆಡಿಎಸ್ ಗೆ ಬಿಗ್ ಶಾಕ್..!!! 'ಕಮಲ' ಪಡೆ ಸೇರಿಕೊಂಡ ಜೆಡಿಎಸ್ ವಕ್ತಾರ..!!

ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದಂತೆ ಅತೃಪ್ತ ಶಾಸಕರು ಪಕ್ಷದಿಂದ ಪಕ್ಷಕ್ಕೆ ಹಾರಾಟ ನಡೆಸುತ್ತಿದ್ದಾರೆ. ಇತ್ತಿಚಿಗಷ್ಟೆ ಸಾಕಷ್ಟು ದೋಸ್ತಿ ನಾಯಕರು ಪಕ್ಷ ಬಿಟ್ಟು ಬಿಜೆಪಿಗೆ ಸೇರಿಕೊಂಡಿದ್ದರು.. ಆದರೆ ಇದೀಗ ಮತ್ತೊಬ್ಬರು ಅದೇ ಸಾಲಿನಲ್ಲಿ ನಡೆಯುತ್ತಿದ್ದಾರೆ.
ಜೆಡಿಎಸ್ ವಕ್ತಾರರಾದ ರಾಘವೇಂದ್ರ ರಾವ್ ಅವರು ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ.ಬಿಜೆಪಿ ಪಕ್ಷವನ್ನು ಸೇರಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾವ್ ಅವರು ಜೆಡಿಎಸ್ ನಲ್ಲಿ ಬೆಲೆ ಇಲ್ಲ ಅಂತ ಹೇಳಿದರು. ಇನ್ನು ಹಲವು ವರುಷಗಳಿದಂ ಜೆಡಿಎಸ್ ಗೆ ನಾನು ದುಡಿದೆ ಆದರೆ ಅಲ್ಲಿ ಬೆಲೆ ಸಿಗಲಿಲ್ಲ, ಹೀಗಾಗಿ ಜೆಡಿಎಸ್ ತೊರೆದು ದೇಶ ಪ್ರೇಮಕೋಸ್ಕರ ಬಿಜೆಪಿಗೆ ಸೇರಿದ್ದು, ಈ ಮೂಲಕ ಬಿಜೆಪಿಯೊಂದಿಗೆ ಮೋದಿ ಜೊತೆಗೆ ದೇಶಕ್ಕಾಗಿ ದುಡಿಯುವೆ ಎಂದು ತಿಳಿಸಿದರು.. ಲೋಕಸಮರ ಹತ್ತಿರ ಬರುತ್ತಿರುವಾಗಲೇ ಅತೃಪ್ತ ಶಾಸಕರು ಪಕ್ಷ ಬಿಡುತ್ತಿರುವುದು ದೋಸ್ತಿಗೆ ಶಾಕ್ ಆದಂತೆ ಆಗಿದೆ.
Comments