ಬಿಗ್ ಬ್ರೇಕಿಂಗ್ : ಸಿಎಂ ಕುಮಾರಸ್ವಾಮಿಯವರ ಆಪ್ತ ಬಿಜೆಪಿ ಗೆ..!!

ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಹಾರುವುದು ಕಾಮನ್ ಆಗಿ ಬಿಟ್ಟಿದೆ...ಇತ್ತಿಚಿಗಷ್ಟೆ ದೋಸ್ತಿಯ ಸಾಕಷ್ಟು ನಾಯಕರು ಬಿಜೆಪಿ ಗೆ ಸೇರ್ಪಡೆಗೊಂಡಿದ್ದರು. ಆದರೆ ಇದೀಗ ಮತ್ತೊಬ್ಬರು ಕೂಡ ಜೆಡಿಎಸ್ ಬಿಟ್ಟು ಬಿಜೆಪಿ ಗೆ ಸೇರಿಕೊಂಡಿದ್ದಾರೆ.. ಲೋಕ ಸಮರದ ಹಿನ್ನಲೆಯಲ್ಲಿಯೇ ತೆನೆ ಪಕ್ಷಕ್ಕೆ ಸೋಲು ಉಂಟಾದಂತೆ ಆಗಿದೆ ಎನ್ನಬಹುದು. ಸಿಎಂ ಕುಮಾರಸ್ವಾಮಿಯವರ ಆಪ್ತರಾದ ಚಿದಾನಂದ ಎಂ ಗೌಡ ಅವರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಗೆ ಸೇರಿಕೊಂಡಿದ್ದಾರೆ.
ಗುರುವಾರ ತುಮಕೂರಿನಲ್ಲಿ ಚಿದಾನಂದ ಎಂ ಗೌಡ ಅವರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದರು.ಮಾಜಿ ಸಚಿವ ವಿ.ಸೋಮಣ್ಣ, ತುಮಕೂರು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಶಿರಾ ತಾಲೂಕಿನಲ್ಲಿ ಚಿದಾನಂದ ಗೌಡ ಅವರು ಪ್ರಭಾವಿ ಶಾಸಕ ಎನ್ನಬಹುದು.. ಚುನಾವಣೆಯ ಹೊತ್ತಿನಲ್ಲಿ ಈ ರೀತಿ ಮಾಡಿದರು ಒಳಿತಲ್ಲ ಎಂಬುದು ಪಕ್ಷದವರ ಅಭಿಪ್ರಾಯ. ಚಿದಾನಂದ ಗೌಡ ಅವರು ಶಿರಾ ತಾಲೂಕಿನ ಪ್ರಭಾವಿ ಜೆಡಿಎಸ್ ನಾಯಕರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಳು ದಿನಗಳು ಬಾಕಿ ಇರುವಾಗ ಚಿದಾನಂದ ಅವರು ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದ್ದಾರೆ. ಈ ಬೆಳವಣಿಗೆ ದೇವೆಗೌಡರ ಸೋಲಿಗೆ ಕಾರಣವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments