ನಾಲ್ಕು ಜಿಲ್ಲೆಗಳಲ್ಲಿ ಜೆಡಿಎಸ್ ಸೋಲು ಖಚಿತ ಎಂದ ಬಿಜೆಪಿ ಶಾಸಕ...!!

ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಲೋಕಸಮರಕ್ಕೆ ದಿನಗಣನೆಯೂ ಕೂಡ ಪ್ರಾರಂಭವಾಗಿ ಬಿಟ್ಟಿದೆ... ಎಲ್ಲಾ ಪಕ್ಷದವರು ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ...ಅದರಲ್ಲೂ ಒಂದಿಷ್ಟು ಅಖಾಡಗಳು ಮಾತ್ರ ಸಿಕ್ಕಾಪಟ್ಟೆ ಹಾಟ್ ಸ್ಪಾಟ್ ಆಗಿಬಿಟ್ಟಿವೆ.. ಹಾಟ್ ಸ್ಪಾಟ್ ಅಖಾಡಗಳಲ್ಲಿ ಶಿವಮೊಗ್ಗ ಕೂಡ ಒಂದು...
ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ನಡುವೆ ಸಖತ್ ಫೈಟ್ ನಡೆಯುತ್ತಿದ್ದು, ಇಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರ ಪ್ರಣಾಳಿಕೆಯಲ್ಲಿ 72 ಸಾವಿರ ಕೊಡುವುದಾಗಿ ಹೇಳಿದೆ. ಆದರೆ ಅದು ತಿಂಗಳಿಗೋ ಅಥವಾ ವರ್ಷಕ್ಕೊ ಎನ್ನುವುದು ಸ್ವತಃ ರಾಹುಲ್ ಗಾಂಧಿಗೂ ಗೊತ್ತಿಲ್ಲ ಎಂದಿದ್ದಾರೆ.ಅಷ್ಟೆ ಅಲ್ಲದೆ ಕುಮಾರ್ ಬಂಗಾರಪ್ಪ ಅವರು ನಾಲ್ಕು ಜಿಲ್ಲೆಗಳಲ್ಲಿ ಜೆಡಿಎಸ್ ಸೋಲು ಖಚಿತ ಎಂಬ ಮಾತನ್ನು ಕೂಡ ಹಾಡಿದ್ದಾರೆ.
Comments