ಸುಮಲತಾ ನನ್ನ ಗೆಳತಿಯೇ.. ಆದರೆ ನಾನ್ ಸಪೋರ್ಟ್ ಮಾಡೋದು ನಿಖಿಲ್'ಗೆ ಎಂದ ಖ್ಯಾತ ನಟಿ..!!

ಮಂಡ್ಯದ ಲೋಕಸಭಾ ಅಖಾಡದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾಗೆ ಸಾಕಷ್ಟು ಸ್ಯಾಂಡಲ್ವುಡ್ ನಟ ನಟಿಯರು ಬೆಂಬಲಿಸುತ್ತಿದ್ದಾರೆ. ಬಿಸಿಲು ಎನ್ನದೆ ಪ್ರಚಾರದಲ್ಲಿ ಆಸಕ್ತಿ ವಹಿಸಿ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ ಇದರ ನಡುವೆ ಖ್ಯಾತ ನಟಿಯೊಬ್ಬರು ನಾನು ಸುಮಲತಾ ಅವರಿಗೆ ಸಪೋರ್ಟ್ ಮಾಡುವುದಿಲ್ಲ ಎಂದಿದ್ದಾರೆ.
ಬಹುಭಾಷಾ ನಟಿ ಹಾಗೂ ಕಾಂಗ್ರೆಸ್ ನಾಯಕಿ ಖುಷ್ಬೂ ನೆನ್ನೆ ಬೆಂಗಳೂರು ಕೇಂದ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಭರ್ಜರಿ ಪ್ರಚಾರ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಖುಷ್ಬೂ, ಮಂಡ್ಯ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದರು. ಮೈತ್ರಿ ಅಭ್ಯರ್ಥಿ ಬೆಂಬಲಿಸುವುದಾಗಿ ಹೇಳಿದ ಖುಷ್ಬೂ, ನಿಖಿಲ್ ಕುಮಾರಸ್ವಾಮಿಯನ್ನೇ ನಾನು ಬೆಂಬಲಿಸುತ್ತೇನೆ ಎಂದರು. ಸುಮಲತಾ ಅಂಬರೀಶ್ ನನ್ನ ಆತ್ಮೀಯ ಗೆಳತಿ. ಆದರೆ ನಮ್ಮ ಮೈತ್ರಿ ಇರುವುದರಿಂದ ನಾನು ಸಿಎಂ ಪುತ್ರನನ್ನು ಬೆಂಬಲಿಸುತ್ತೇನೆ. ಸುಮಲತಾಗೆ ಒಳ್ಳೇಯದ್ದಾಗಲಿ ಎಂದು ಶುಭಹಾರೈಸಬಲ್ಲೆ ಅಷ್ಟೇ ಎಂದು ಹೇಳಿದರು. ರಾಜಕೀಯದಲ್ಲಿ ನಮ್ಮವರು ಎಂದು ಗೊತ್ತಿದ್ದರು ಕೆಲವೊಮ್ಮೆ ಬೇರೆಯವರಿಗೆ ಸಪೋರ್ಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.
Comments