ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಸುಮಲತಾ ಹೇಳಿಕೆ..!!

ಈಗಾಗಲೇ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದೆ..ಸುಮಲತಾ ಹಾಗೂ ದೋಸ್ತಿಗಳ ವಿರುದ್ದ ಮುಖಾಮುಖಿ ಸಮರ ಏರ್ಪಟ್ಟಿದೆ.. ಪ್ರಚಾರದಲ್ಲಿ ಒಬ್ಬರಿಗೆ ಒಬ್ಬರು ಟಾಂಗ್ ಕೊಟ್ಟುಕೊಂಡೆ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ ಸುಮಲತಾ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದು, ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರ ವಿರುದ್ಧ ಮಾಡಿರುವ ಆರೋಪ, ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಹತಾಶೆಗೊಳಗಾಗಿರುವ ಜೆಡಿಎಸ್ ನಾಯಕರು ಈಗ ತಮ್ಮ ವಿರುದ್ಧ ವೈಯಕ್ತಿಕ ಜೀವನದ ಕುರಿತು ದಾಳಿ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡುವ ಕುರಿತು ಅವರುಗಳು ಸಮಾಲೋಚನೆ ನಡೆಸಿದ್ದು, ಸದ್ಯದಲ್ಲೇ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಿ ಸಾಕಷ್ಟು ಆರೋಪಗಳು ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.. ಯಾರು ಸರಿ ಯಾರು ತಪ್ಪು ಎಂಬುದು ಮಂಡ್ಯ ಜನತೆಯ ತೀರ್ಮಾನವಾಗಿರುತ್ತದೆ. ಯಾರ ಮೇಲೆ ಯಾರು ಆರೋಪವರಿಸಿದರೂ ಮತ ಬಾಂಧವರ ಒಲವು ಯಾರ ಕಡೆ ಇದೆಯೋ ಎಂಬುದನ್ನು ಕಾದು ನೋಡಬೇಕಿದೆ.
Comments