ಸಿಎಂ ಪುತ್ರನಿಗೆ ತಿರುಗೇಟು ಕೊಟ್ಟ ರಾಕಿ ಬಾಯ್..!!

ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಕುತೂಹಲ ಎದುರಾಗಿದೆ.. ಅದರಲ್ಲೂ ಮಂಡ್ಯ ಅಖಾಡವಂತೂ ರಣರಂಗವಾಗಿ ಬಿಟ್ಟಿದೆ. ಒಬ್ಬರಿಗೆ ಒಬ್ಬರು ಟಾಂಗ್ ಕೊಟ್ಟುಕೊಂಡೆ ಪ್ರಚಾರ ಮಾಡುತ್ತಿದ್ದಾರೆ.ಒಂದು ಕಡೆ ದರ್ಶನ್ ಮತ್ತು ಯಶ್ ಮಂಡ್ಯ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಪರ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ಯಶ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದರು. ಆದರೆ ಇದೀಗ ರಾಕಿಬಾಯ್ ಜಾಗ್ವಾರ್ ಹುಡುಗನಿಗೆ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಉಮ್ಮಡಹಳ್ಳಿಯ ಗ್ರಾಮದಲ್ಲಿ ಯಶ್ ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದು,`ಹೌದಪ್ಪ ನನಗೆ ಬಾಡಿಗೆ ಕಟ್ಟೋದಕ್ಕೆ ಯೋಗ್ಯತೆ ಇಲ್ಲ ಅಂತಾನೆ ಅನ್ಕೋಳಿ, ಆದ್ರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ ಉತ್ತರ ಕರ್ನಾಟಕದಲ್ಲೂ ಇದ್ದಾರೆ, ನಾನು ಏನು ಮಾಡಿದ್ದೇನೆ ಎಂದು ಹೋಗಿ ಕೊಪ್ಪಳ ಅಂತ ಊರಿದೆಯಲ್ಲ ಅಲ್ಲಿ ಕೇಳಲಿ ಎಂದು ತಿರುಗೇಟು ನೀಡಿದರು. ಇನ್ನೂ ಇದಕ್ಕೂ ಮೊದಲೂ ನಿಖಿಲ್ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಬಾಡಿಗೆ ಕಟ್ಟದೆ ಇರೋರಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದಿದ್ದರು.. ಆದರೆ ಇದೀಗ ಯಶ್ ಆ ಮಾತಿಗೆ ಸಖತ್ತಾಗಿಯೇ ಟಾಂಗ್ ಕೊಟ್ಟಿದ್ದಾರೆ.
Comments