ನಾವು ಬಿಜೆಪಿಗೆ ಮತ ಹಾಕೋದು… ಮೋದಿಗೆ ಜೈ ಎಂದ ಜೆಡಿಎಸ್ ಮುಖಂಡರು..!!ಕಾರಣ ಏನ್ ಗೊತ್ತಾ..?

ಈಗಾಗಲೇ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ದೋಸ್ತಿಗಳಲ್ಲಿ ಒಳಜಗಳ ಈಗಾಗಲೇ ಪ್ರಾರಂಭವಾಗಿ ಬಿಟ್ಟಿದೆ.. ಮೇಲ್ನೋಟಕ್ಕೆ ಎಲ್ಲವೂ ಕೂಡ ಸರಿ ಕಂಡರೂ ಯಾವುದು ಸರಿ ಎನಿಸುವಂತೆ ಕಾಣುತ್ತಿಲ್ಲ.. ಅದರಲ್ಲಿ ದೋಸ್ತಿ ಪಕ್ಷಗಳು ಒಳಜಗಳಕ್ಕೆ ಎಡೆ ಮಾಡಿಕೊಡುವಂತಿವೆ… ಇದೀಗ ದೋಸ್ತಿಗಳು ಬಿಜೆಪಿ ಜೈ, ಮೋದಿಗೆ ಜೈ ಎನ್ನುತ್ತಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪಕ್ಷಗಳ ನಡುವಿನ ಹೊಂದಾಣಿಕೆ ಸರಿದಾರಿಗೆ ಬರಲು ಸಾಕಷ್ಟು ಪ್ರಯತ್ನಗಳು ನಡೆದಿವೆ.. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗಿನ ಸಂಧಾನದ ನಂತರವೂ ಯಾವುದೇ ಸಮಸ್ಯೆಯು ಕೂಡ ಬಗೆಹರಿದಂಗೆ ಕಾಣುತ್ತಿಲ್ಲ… ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನೀಡುವ ಸಂಬಂಧ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಶುಕ್ರವಾರ ಕರೆದಿದ್ದ ಜೆಡಿಎಸ್ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.. ಅದೇ ಸಂದರ್ಭದಲ್ಲಿ ಮೋದಿಗೆ ಜೈಕಾರ ಕೂಗಿದ ಪ್ರಸಂಗವು ಕೂಡ ನಡೆಯಿತು….ಈ ಸಭೆಯಲ್ಲಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ. ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿ ಪ್ರಮುಖರು ಭಾಗವಹಿಸಿದ್ದರು. ದೋಸ್ತಿ ಸರ್ಕಾರದ ಕೆಲವರು. 'ನಾವು ಕಾಂಗ್ರೆಸ್ ಗೆ ಮತ ಹಾಕಲ್ಲ. ನರೇಂದ್ರ ಮೋದಿಗೆ ಜೈ, ಬಿಜೆಪಿಗೆ ಜೈ' ಎಂದು ಕೂಗಿದರು.
Comments