ಬಿಜೆಪಿಗೆ ಬಿಗ್ ಶಾಕ್..! ಪಕ್ಷ ತೊರೆಯಲು 6 ಶಾಸಕರು ರೆಡಿ..?

ಲೋಕಸಮರಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಭರ್ಜರಿ ಪ್ರಚಾರ ಆರಂಭಗೊಂಡಿದೆ.. ಕಡು ಬಿಸಿಲು ಎನ್ನದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಲೋಕ ಸಮರವನ್ನೆ ಗೆಲ್ಲಲೇ ಬೇಕು ಎಂದು ಅಭ್ಯರ್ಥಿಗಳು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಲೋಕ ಸಮರ ಹತ್ತಿರ ಬರುತ್ತಿದ್ದಂತೆ ಪಕ್ಷ ತೊರೆಯುವವರ ಸಂಖ್ಯೆಯು ಕೂಡ ಜಾಸ್ತಿಯಾಗುತ್ತಿದೆ. ಇದೀಗ ಬಿಜೆಪಿಯ ಉಮೇಶ್ ಕತ್ತಿ ಸೇರಿದಂತೆ ಆರು ಶಾಸಕರು ಪಕ್ಷ ತೊರೆಯಲಿದ್ದಾರೆ ಎನ್ನಲಾಗಿದೆ.
ಇದೀಗ ಬಿಜೆಪಿಗೆ ಆತಂಕದ ಸುದ್ದಿಯನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರೆಡ್ಡಿ ನೀಡಿದ್ದಾರೆ. ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ಶಾಸಕ ಉಮೇಶ ಕತ್ತಿ ಸೇರಿದಂತೆ ಕೆಲವು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಶೀಘ್ರವೇ ಉಮೇಶ್ ಕತ್ತಿ ಸೇರಿದಂತೆ 5 - 6 ಮಂದಿ ಶಾಸಕರು ಬಿಜೆಪಿಯನ್ನು ತೊರೆಯಲಿದ್ದಾರೆ. ಬಿಜೆಪಿ ತೊರೆಯುವ ಶಾಸಕರೆಲ್ಲರೂ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ… ಒಟ್ಟಿನಲ್ಲಿ ಬಿಜೆಪಿ ತೊರೆಯುವುದಂತೂ ನಿಜ ಎಂದಿದ್ದಾರೆ. ಒಟ್ಟಿನಲ್ಲಿ ಅತೃಪ್ತ ಶಾಸಕರು ಪಕ್ಷ ಬಿಡಲು ಒಳಗೊಳಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿಯೇ ಹೀಗೆ ಪಕ್ಷ ತೊರೆಯುತ್ತಿರುವುದು ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಬಹುದೇನೋ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
Comments