ಜೆಡಿಎಸ್ ನ ಪ್ರಭಾವಿ ನಾಯಕನ ಮೇಲೆ ದಾಖಲಾಯ್ತು FIR..!!
ಚುನಾವಣೆ ನಡೆಯುತ್ತಿರುವುದು ಇಂಡಿಯಾದಲ್ಲೋ ಅಥವಾ ಮಂಡ್ಯದಲ್ಲೋ ಎಂಬ ಮಾತು ಇದೀಗ ಎಲ್ಲಡೆ ಕೇಳಿ ಬರುತ್ತಿದೆ… ,ಮಂಡ್ಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಸುಮಲತಾ ಪರವಾಗಿ ಸ್ಟಾರ್ ನಾಯಕರು ಪ್ರಚಾರ ಮಾಡುತ್ತಿರುವುದಕ್ಕಾಗಿ ದೋಸ್ತಿ ನಾಯಕರು ಗರಂ ಆಗಿದ್ದಾರೆ.. ಒಬ್ಬರ ಮೇಲೆ ಮತ್ತೊಬ್ಬರು ಪ್ರತ್ಯಾರೋಪಗಳನ್ನು ಹಾಕುತ್ತಿದ್ದಾರೆ.. ಇದೇ ಸಮಯದಲ್ಲಿ ಸಂಸದ ಶಿವರಾಮೇಗೌಡ ಮಂಡ್ಯ ಪಕ್ಷೇತರ ಅಭ್ಯರ್ಥಿಯ ವಿರುದ್ದ ನಾಲಿಗೆಯನ್ನು ಹರಿಬಿಟ್ಟಿದ್ದರು.
ಸುಮಲತಾ ಮತ್ತು ಅವರ ಬೆಂಬಲಿಗರ ಮೇಲೆ ಮಾತಿನಲ್ಲಿಯೇ ನಿಂದನೆ ಮಾಡುತ್ತಿರುವ ಸಂಸದ ಶಿವರಾಮೇಗೌಡರ ವಿರುದ್ದ FIR ದಾಖಲಾಗಿದೆ. ಸುಮಲತಾ, ದರ್ಶನ್. ರಾಕಲೈನ್ ವೆಂಕಟೇಶ್ ಇವರು ಯಾರು ಕೂಡ ಗೌಡರಲ್ಲ… ಇವರೆಲ್ಲಾ ನಾಯ್ಡುಗಳು, ಮಂಡ್ಯವನ್ನು ನಾಯ್ಡುಗಳ ಕೈ ಕೊಡಬೇಡಿ ಎಂಬ ಹೇಳಿಕೆಯನ್ನು ಕೊಟ್ಟಿದ್ದರು.. ಈ ಹೇಳಿಕೆ ಇದೀಗ ಸುದ್ದಿಯಾಗುತ್ತಿದೆ.. ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಬಾಳಯ್ಯ ಅವರು ಚುನಾವಣ ಅಧಿಕಾರಿಗೆ ದೂರು ನೀಡಿದ್ದಾರೆ. ಚುನಾವಣಾ ಅಧಿಕಾರಿಯ ಸೂಚನೆಯಂತೆ ಪೀಪಲ್ ರೆಪ್ರೆಸೆಂಟೇಶನ್ ಆಕ್ಟ್ ಸೆಕ್ಷನ್ 125 ಪ್ರಕಾರ ಶಿವರಾಮೇಗೌಡರ ವಿರುದ್ದ ಇದೀಗ ಎಫ್ ಐ ಆರ್ ದಾಖಲಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆಯು ಮುಗಿಯುವುದರೊಳಗೆ ಏನೇನು ಆಗುತ್ತದೋ ಕಾದು ನೋಡಬೇಕಿದೆ.
Comments