‘ಕೈ’ ಗೆ ಕೈ ಕೊಟ್ಟು ‘ಕಮಲ’ ಅರಳಿಸಿದ ಮಾಜಿ ಸಿಎಂ ಆಪ್ತ..!!!

ಲೋಕಸಭೆಯ ಕಾವು ರಂಗೇರುತ್ತಿದೆ. ಅಖಾಡಗಳು ದಿನದಿಂದ ದಿನಕ್ಕೆ ರಣರಂಗವಾಗುತ್ತಿವೆ, ಪ್ರಚಾರದ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಅಷ್ಟೆ ಅಲ್ಲದೆ ಇದರ ನಡುವೆ ಪಕ್ಷ ಬಿಟ್ಟು ಪಕ್ಷಕ್ಕೆ ಸೇರುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಈಗಾಗಲೇ ದೋಸ್ತಿ ಪಕ್ಷದಿಂದ ಬಿಜೆಪಿಗೆ, ಬಿಜೆಪಿಯಿಂದ ದೋಸ್ತಿ ಪಕ್ಷಕ್ಕೆ ಹಾರಾಡುತ್ತಲೇ ಇದ್ದಾರೆ.
ಸಿದ್ದರಾಮಯ್ಯ ಆಪ್ತ ಚಿನ್ನಸ್ವಾಮಿ ಬಳಿಕ ಎಚ್.ಸಿ.ಮಹದೇವಪ್ಪ ಆಪ್ತ ಕಿನಕನಹಳ್ಳಿ ರಾಚಯ್ಯ ಮತ್ತು ಪುಟ್ಟರಂಗಶೆಟ್ಟಿ ಬಲಗೈ ಬಂಟ ವೈ.ಕೆ.ಮೋಳೆ ರಾಜು ಕಾಂಗ್ರೆಸ್ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಎಚ್.ರಾಚಯ್ಯ ಮಾಜಿ ಸಿಎಂ ಅತ್ಯಾಪ್ತರಲ್ಲಿ ಒಬ್ಬರಾಗಿದ್ದರು.. ಅಷ್ಟೆ ಅಲ್ಲದೆ ಸಿದ್ದರಾಮಯ್ಯನವರ ಶಿಷ್ಯ ಎಂದು ಎಲ್ಲರೂ ಹೇಳುತ್ತಿದ್ದರು.. ಈಗ ಎಚ್.ರಾಚಯ್ಯ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡಿದ್ದಾರೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದ ಕೈ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿ ತೀವ್ರ ಪೈಪೋಟಿ ನಡೆಸಿದ್ದರು. ಟಿಕೆಟ್ ಸಿಗದ ಅಸಮಧಾನದಿಂದಲೇ ಬಿಜೆಪಿ ಸೇರಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಅತೃಪ್ತ ಶಾಸಕರು ಪಕ್ಷ ತೊರೆಯುತ್ತಿದ್ದಾರೆ..
Comments