ಬಿಜೆಪಿ ಅಭ್ಯರ್ಥಿಯ ರಹಸ್ಯ ಬಿಚ್ಚಿಟ್ಟ ಪ್ರಜ್ವಲ್ ರೇವಣ್ಣ..!!

ಲೋಕ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಬಿಸಿಲಿಗಿಂತ ಜಾಸ್ತಿಯೇ ಚುನಾವಣೆಯ ಕಾವು ಇದೆ.. ಮಂಡ್ಯ ಅಖಾಡ ಸಾಕಷ್ಟು ಸುದ್ದಿಯನ್ನು ಮಾಡಿತ್ತು.. ಆದರೆ ಇದೀಗ ಹಾಸನ ಕೂಡ ಅಷ್ಟೆ ಸದ್ದನ್ನು ಮಾಡುತ್ತಿದೆ. ಪ್ರತಿಷ್ಠಿತ ಕಣವಾಗಿರುವ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ಮತ್ತು ಸಚಿವ ಹೆಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪ್ರಚಾರದ ನಡುವೆ ಆರೋಪ ಪ್ರತ್ಯಾರೋಪಗಳ ಪಟ್ಟಿಯೇ ಕೇಳಿ ಬರುತ್ತಿದೆ.
ಹಾಸನದಲ್ಲಿ ಎ. ಮಂಜು ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮೈತ್ರಿಕೂಟದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರಿಗೆ ಸಿದ್ಧಾಂತವೂ ಇಲ್ಲ, ಬದ್ಧತೆಯೂ ಇಲ್ಲ. ಅಧಿಕಾರ, ಹಣಕ್ಕಾಗಿ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಎ.ಮಂಜು ಬಿಜೆಪಿ ಸೇರುವ ಮೊದಲು ಮುಸ್ಲಿಮರನ್ನು ಭೇಟಿಯಾಗಿ ಅವರ ಅಭಿಪ್ರಾಯ ಪಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿರುವ ಪ್ರಜ್ವಲ್ ರೇವಣ್ಣ, ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದ್ದಾರೆ. ಒಟ್ಟಾರೆಯಾಗಿ ಹಾಸನ ಕೂಡ ಮಂಡ್ಯ ಕ್ಷೇತ್ರದಷ್ಟೆ ಬಿಸಿಯಾಗುತ್ತಿದೆ. ಲೋಕಸಭಾ ಚುನಾವಣೆ ಮುಗಿಯುವುದರೊಳಗೆ ಯಾವೆಲ್ಲಾ ರೀತಿಯ ಬದಲಾವಣೆಗಳು ರಾಜಕೀಯದಲ್ಲಿ ಆಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.
Comments